ಬೆಂಗಳೂರು: ಕೊಲ್ಕತಾ ನೈಟ್ ರೈಡರ್ಸ್ (KKR) ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 2025ಕ್ಕೆ ಮುನ್ನ ದೊಡ್ಡ ಗೊಂದಲಕ್ಕೆ ಸಿಲುಕಿದೆ. ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡರೂ, ಫ್ರಾಂಚೈಸಿ ಇನ್ನೂ ತಂಡದ ನಾಯಕನನ್ನು ಅಂತಿಮಗೊಳಿಸಿಲ್ಲ. ಹೀಗಾಗಿ ಯಾರು ತಂಡವನ್ನು ಮುನ್ನಡೆಸುತ್ತಾರೆ ಎಂಬ ಬಗ್ಗೆ ಕೌತುಕ ಮುಂದುವರಿದಿದೆ.
ಶ್ರೇಯಸ್ ಅಯ್ಯರ್ 2024 ಆವೃತ್ತಿಯ ಬಳಿಕ ಫ್ರಾಂಚೈಸಿಯಿಂದ ಹೊರ ಬಿದ್ದಿದ್ದರು. ಹೀಗಾಗಿ ಕೊಲ್ಕತಾ ನೈಟ್ ರೈಡರ್ಸ್ ಹೊಸ ನಾಯಕನನ್ನು ಹುಡುಕಬೇಕಾಗಿದೆ. ಶ್ರೇಯಸ್ ಅಯ್ಯರ್ 2024ರಲ್ಲಿ ಕೊಲ್ಕತಾ ನೈಟ್ ರೈಡರ್ಸ್ಗೆ ಟ್ರೋಫಿ ಗೆದ್ದು ಗೆದ್ದುಕೊಟ್ಟದ್ದರು.. ಆ ನಂತರ ಅವರನ್ನು ಪಂಜಾಬ್ ಕಿಂಗ್ಸ್ ಹರಾಜಿನಲ್ಲಿ ಖರೀದಿಸಿದ್ದು, ಹೊಸ ತಂಡವನ್ನು ಮುನ್ನಡೆಸಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಅವರನ್ನು ಭಾರೀ ಮೊತ್ತವಾದ 26.75 ಕೋಟಿ ರೂ.ಗೆ ಖರೀದಿಸಿದೆ.
ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಿದ ಬಳಿಕ, ಹಾಲಿ ಚಾಂಪಿಯನ್ಗಳು ಹರಾಜಿನಲ್ಲಿ ನಾಯಕತ್ವದ ಬಗ್ಗೆ ಹೆಚ್ಚು ಯೋಜನೆ ಮಾಡಿಲ್ಲ. ಆದರೆ, ಅವರ ತಂಡದಲ್ಲಿ ಕೆಲವು ಉತ್ತಮ ಆಯ್ಕೆಗಳಿವೆ. ಅಜಿಂಕ್ಯ ರಹಾನೆ ತಮ್ಮ ಅಂತಾರಾಷ್ಟ್ರೀಯ ಮತ್ತು ದೇಶೀಯ ಅನುಭವದಿಂದ ನಾಯಕತ್ವದ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.
ಅಜಿಂಕ್ಯ ರಹಾನೆ ಅಥವಾ ವೆಂಕಟೇಶ್ ಅಯ್ಯರ್ ಯಾರು ಬೆಸ್ಟ್?
ದೇಶೀಯ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡದ ನಾಯಕ ರಿಂಕು ಸಿಂಗ್ ಕೂಡ ಕೆಕೆಆರ್ ತಂಡದಲ್ಲಿದ್ದಾರೆ. ಅದೇ ರೀತಿ 23.75 ಕೋಟಿ ರೂ.ಗೆ ಖರೀದಿಸಿದ ವೆಂಕಟೇಶ್ ಅಯ್ಯರ್ ಅವರನ್ನು ಸಹ ನಾಯಕನಾಗಿ ಪರಿಗಣಿಸಬಹುದು.
ಕ್ರಿಕ್ಇನ್ಫೋ ವರದಿಗಳ ಪ್ರಕಾರ, ಕೊಲ್ಕತಾ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ ಅಥವಾ ವೆಂಕಟೇಶ್ ಅಯ್ಯರ್ ಅವರಲ್ಲಿ ಒಬ್ಬರನ್ನು ನಾಯಕನಾಗಿ ಆಯ್ಕೆ ಮಾಡಲು ಪರಿಗಣಿಸುತ್ತಿದೆ. ಆದರೆ ಶೀಘ್ರದಲ್ಲೇ ಫ್ರಾಂಚೈಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಅಜಿಂಕ್ಯ ರಹಾನೆ ಸರಿಯಲ್ಲ; ಸಂಜಯ್ ಮಂಜ್ರೇಕರ್.
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುವುದು ಬೇಡ ಎಂದಿದ್ದಾರೆ. ಈ ತಂಡವು ಇತರ ಎಲ್ಲ ತಂಡಗಳಿಗಿಂತ ಶ್ರೇಷ್ಠವಾಗಿದೆ ಎಂದರು.
“ಅಜಿಂಕ್ಯ ರಹಾನೆ ನಾಯಕನಾಗಬಾರದು. ನಾನು ಅವರನ್ನು ಸರಿಯಾದ ಆಯ್ಕೆ ಎಂದು ಭಾವಿಸುವುದಿಲ್ಲ.” ಎಂದು ಮಂಜ್ರೆಕರ್ ಹೇಳಿದ್ದಾರೆ.
“KKR ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವ ಏಕೈಕ ತಂಡವಲ್ಲ. ಅವರ ಬಳಿ ಬ್ಯಾಟಿಂಗ್ ಸಾಮರ್ಥ್ಯ, ವೇಗ ಮತ್ತು ಸ್ಪಿನ್ ಎಲ್ಲವೂ ಸಮತೋಲನದಲ್ಲಿವೆ” ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿದೆ. ಕೊಲ್ಕತಾ ನೈಟ್ ರೈಡರ್ಸ್ ಮಾರ್ಚ್ 23ರಂದು ಈಡನ್ ಗಾರ್ಡನ್ಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟೂರ್ನಿಯ ಉದ್ಘಾಟನಾ ಪಂದ್ಯ ಆಡಲಿದೆ.