ಬೆಂಗಳೂರು: ಹೂಡಿಕೆಗೆ ಈಗ ಹತ್ತಾರು ದಾರಿಗಳಿವೆ. ಮೊಬೈಲ್ ನಲ್ಲಿಯೇ ಈಗ ಸುಲಭವಾಗಿ ಹಲವೆಡೆ ಹೂಡಿಕೆ ಮಾಡಬಹುದಾಗಿದೆ. ರಿಸ್ಕ್ ತೆಗೆದುಕೊಳ್ಳುವವರು ಮ್ಯೂಚುವಲ್ ಫಂಡ್, ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ, ನಮಗೆ ರಿಸ್ಕ್ ಎನ್ನುವವರು ಪಿಪಿಎಫ್ ನಂತಹ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲಿದ್ದಾರೆ. ಹಾಗಾದರೆ, ಎಸ್ಐಪಿ ಹಾಗೂ ಪಿಪಿಎಫ್ (SIP vs PPF) ನಡುವಿನ ವ್ಯತ್ಯಾಸಗಳು ಏನು? ಪ್ರತಿ ವರ್ಷ 85 ಸಾವಿರ ರೂ.ನಂತೆ 15 ವರ್ಷ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ಸ್ ಬರುತ್ತದೆ? ಯಾವುದು ಉತ್ತಮ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಎಸ್ಐಪಿ ಬಗ್ಗೆ ತಿಳಿದುಕೊಳ್ಳಿ
- ಮಾರ್ಕೆಟ್ ಆಧಾರಿತ ಹೂಡಿಕೆಯ ಆಯ್ಕೆ
- ಹಣಕಾಸು ಸಾಮರ್ಥ್ಯದಂತೆ ಎಷ್ಟಾದರೂ ಹೂಡಿಕೆ ಮಾಡಬಹುದು
- ದೀರ್ಘಾವಧಿಗೆ ಶೇ.12ರಷ್ಟು ರಿಟರ್ನ್ಸ್ ಸಿಗುವ ಸಾಧ್ಯತೆ
- ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಆಧಾರದ ಮೇಲೆ ಹೂಡಿಕೆ ಸಾಧ್ಯ
- ಹೆಚ್ಚು ರಿಸ್ಕ್ ಇದೆ
- ಲಾಕ್-ಇನ್ ಪೀರಿಯಡ್ ಇರಲ್ಲ, ಯಾವಾಗ ಬೇಕಾದರೂ ವಿತ್ ಡ್ರಾ ಮಾಡಬಹುದು
ಪಿಪಿಎಫ್ ಬಗ್ಗೆ ಅರಿಯಿರಿ
- ಸರ್ಕಾರದ ಬೆಂಬಲಿ ಉಳಿತಾಯ ಯೋಜನೆ
- ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಸಾಧ್ಯ
- ಶೇ.7.1ರಷ್ಟು ರಿಟರ್ನ್ಸ್ ಖಚಿತ
- 15 ವರ್ಷಗಳ ಲಾಕ್-ಇನ್ ಪೀರಿಯಡ್ ಇರುತ್ತೆ
- ಕಡಿಮೆ ರಿಸ್ಕ್ ಇದೆ
ಎಸ್ಐಪಿ ಹೂಡಿಕೆ ಲೆಕ್ಕಾಚಾರ
ಹೂಡಿಕೆ: ವರ್ಷಕ್ಕೆ 85 ಸಾವಿರ
ಅವಧಿ: 15 ವರ್ಷ
ಅಂದಾಜು ರಿಟರ್ನ್ಸ್: 12%
ಹೂಡಿಕೆ ಮೊತ್ತ: 12.74 ಲಕ್ಷ ರೂ.
ಕ್ಯಾಪಿಟಲ್ ಗೇನ್: 22.98 ಲಕ್ಷ ರೂ.
ಒಟ್ಟು ಗಳಿಕೆ: 35.73 ಲಕ್ಷ ರೂ.
ಪಿಪಿಎಫ್ ಹೂಡಿಕೆ ಲೆಕ್ಕಾಚಾರ
ಹೂಡಿಕೆ: ವರ್ಷಕ್ಕೆ 85 ಸಾವಿರ
ಅವಧಿ: 15 ವರ್ಷ
ಅಂದಾಜು ರಿಟರ್ನ್ಸ್: 7.1%
ಹೂಡಿಕೆ ಮೊತ್ತ: 12.74 ಲಕ್ಷ ರೂ.
ಕ್ಯಾಪಿಟಲ್ ಗೇನ್: 10.30 ಲಕ್ಷ ರೂ.
ಒಟ್ಟು ಗಳಿಕೆ: 23.04 ಲಕ್ಷ ರೂ.