ಬೆಂಗಳೂರು: ಪ್ರಖ್ಯಾತ ಆಸ್ಪತ್ರೆ ವಿರುದ್ದ ಇಂದಿನಿಂದ ತನಿಖೆ ಚುರುಕುಗೊಂಡಿದೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಟ್ರಯಲ್ ಹಗರಣದ ವಿರುದ್ಧ ತನಿಖೆ ಆರಂಭವಾಗಿದೆ. ವಿವಿಧ ಗಂಭೀರ ಆರೋಪಗಳನ್ನ ಹೊತ್ತಿರುವ ಆಸ್ಪತ್ರೆಯ ವಿರುದ್ಧ ಇಂದಿನಿಂದ ಪ್ರಖ್ಯಾತ ಆಸ್ಪತ್ರೆಯಲ್ಲಿ ತನಿಖೆ ಆರಂಭವಾಗಿದೆ.
ಈ ಹಿಂದೆ ಕ್ಲಿನಿಯಲ್ ಟ್ರಯಲ್ ಹಗರಣದ ಬಗ್ಗೆ ಕೃಷ್ಣ ಭಟ್ ಧ್ವನಿ ಎತ್ತಿದ್ದರು. ಆದಾದ ಬಳಿಕ ಕೃಷ್ಣ ಭಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ಅನೇಕ ವೈದ್ಯರು ಹಾಗೂ ಸಿಇಓ ಗಳು ಪಲಾಯನ ಮಾಡಿದ್ದರು. ಈ ಕುರಿತು ತನಿಖೆ ನಡೆಸಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮುಂದಾಗಿದೆ. ಆರೋಗ್ಯ ಸಚಿವರು ಕೂಡ ತನಿಖೆಗೆ ಆಗ್ರಹಿಸಿದ್ದಾರೆ.