ಬೆಂಗಳೂರು: ಷೇರು ಮಾರುಕಟ್ಟೆ ಕುರಿತು ಕಡಿಮೆ ಮಾಹಿತಿ, ಮಾರುಕಟ್ಟೆಯಲ್ಲಿ ಪದೇಪದೆ ಏರಿಳಿತ ಉಂಟಾಗುವ ಕಾರಣ ಹೆಚ್ಚಿನ ಜನ ಸಾಂಪ್ರದಾಯಿಕ ಹೂಡಿಕೆಗಳ ಮೊರೆ ಹೋಗುತ್ತಾರೆ. ಅಂದರೆ, ಬ್ಯಾಂಕ್ ಎಫ್ ಡಿ, ಪೋಸ್ಟ್ ಆಫೀಸ್ ಆರ್ ಡಿ ಸೇರಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇಂತಹ ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (ಎಂಐಎಸ್) ಕೂಡ ಒಂದಾಗಿದೆ.
ಹೌದು, ಪೋಸ್ಟ್ ಆಫೀಸ್ ನ ಮಂತ್ಲಿ ಇನ್ ಕಮ್ ಯೋಜನೆಯು ಹೂಡಿಕೆದಾರರಿಗೆ ಶೇ.7.4ರಷ್ಟು ರಿಟರ್ನ್ಸ್ ನೀಡುತ್ತದೆ. ಅದರಲ್ಲೂ, ನೀವು ಎಂಐಎಸ್ ಯೋಜನೆಯಲ್ಲಿ 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ತಿಂಗಳಿಗೆ ನಿಮಗೆ 3,083 ರೂಪಾಯಿ ಖಚಿತ ಬಡ್ಡಿಯ ಲಾಭ ಸಿಗಲಿದೆ. ಇದು ಕೇಂದ್ರ ಸರ್ಕಾರದ ಬೆಂಬಲ ಇರುವ ಕಾರಣ ಖಚಿತ ಆದಾಯವನ್ನು ನಿರೀಕ್ಷಿಸಬಹುದಾಗಿದೆ.
ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 9 ಲಕ್ಷ ರೂಪಾಯಿವರೆಗೆ ಒಮ್ಮೆಗೆ ಹೂಡಿಕೆ ಮಾಡಬಹುದಾಗಿದೆ. ಜಂಟಿ ಖಾತೆಯಾದರೆ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂಬುದು ತಜ್ಞರ ಸಲಹೆಯಾಗಿದೆ. ಕನಿಷ್ಠ 1 ಸಾವಿರ ರೂಪಾಯಿಯನ್ನೂ ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.
ಹಾಗೊಂದು ವೇಳೆ, ನೀವು 5 ಲಕ್ಷ ರೂಪಾಯಿಯನ್ನು 5 ವರ್ಷಗಳವರೆಗೆ ಎಂಐಎಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 5 ವರ್ಷಗಳ ಬಳಿಕ ನಿಮಗೆ 1.86 ಲಕ್ಷ ರೂಪಾಯಿಯ ಬಡ್ಡಿ ಲಾಭ ಸಿಗಲಿದೆ. ನೀವು ಹೂಡಿದ 5 ಲಕ್ಷ ರೂಪಾಯಿಯು 5 ವರ್ಷದ ಬಳಿಕ 6.86 ಲಕ್ಷ ರೂಪಾಯಿ ಆಗಲಿದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಬಗ್ಗೆ ಆತಂಕ ಇರುವವರು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ: ನಿಮಗೀಗ 30 ವರ್ಷ, 45 ತಲುಪುವಷ್ಟರಲ್ಲಿ ಒಂದು ಕೋಟಿ ಗಳಿಸಬೇಕಾ? ಇಲ್ಲಿದೆ ಆಯ್ಕೆ



















