ಬೆಂಗಳೂರು: ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದ ನಿರೂಪಕಿ ದಿವ್ಯಾ ವಸಂತ್ ಅರೆಸ್ಟ್ ಆಗಿದ್ದಾರೆ.
ದಿವ್ಯಾ ವಸಂತ ವಿರುದ್ಧ ಇಂದಿರಾ ನಗರದ ಬ್ಯೂಟಿ ಪಾರ್ಲರ್ ನ ಮಾಲೀಕರೊಬ್ಬರು ಕಿರುಕುಳದ ದೂರು ದಾಖಲಿಸಿದ್ದರು. ಆನಂತರ ದಿವ್ಯಾ ತಲೆಮರೆಸಿಕೊಂಡಿದ್ದರು. ಆದೆರ, ಜು. 11ರಂದು ಕೇರಳದಲ್ಲಿ ಬಂಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಖಾಸಗಿ ಸುದ್ದಿ ವಾಹಿನಿಯ ಮಾಜಿ ಸಿಇಒ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ಅವರ ಸಹೋದರ ಸಂದೇಶ್ ವಿರುದ್ಧ ದೂರು ದಾಖಲಾಗಿತ್ತು. ಈ ಇಬ್ಬರು ಆರೋಪಿಗಳನ್ನು ಪೊಲೀಸರು ವಾರದ ಹಿಂದೆಯೇ ಬಂಧಿಸಿದ್ದರು. ಆದರೆ, ದಿವ್ಯಾ ಬಂಧನ ಆಗಿರಲಿಲ್ಲ. ಅಂದಿನಿಂದ ದಿವ್ಯಾ ತಲೆ ಮರೆಸಿಕೊಂಡಿದ್ದರು. ದಿವ್ಯಾ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಅವರ ಮನೆ ಮೇಲೆ ಪೊಲೀಸ್ ರೇಡ್ ಆಗಿತ್ತು. ಅದರ ಸುಳಿವು ಸಿಗುತ್ತಲೇ ದಿವ್ಯಾ ಮನೆಯಲ್ಲಿದ್ದ ತಮ್ಮದೊಂದು ಕ್ಯಾಮೆರಾ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ಸಮೇತ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದರೆಂದು ಹೇಳಲಾಗಿತ್ತು.
ಆದರೆ, ಈ ವೇಳೆ ಪೊಲೀಸರಿಗೆ ಹಲವಾರು ಸಾಕ್ಷಿಯುಳ್ಳ ವಸ್ತುಗಳು ಕೂಡ ಸಿಕ್ಕಿದ್ದವು. ಅದರ ಆಧಾರದಲ್ಲಿ ದಿವ್ಯಾ ಅವರನ್ನು ಹುಡುಕುತ್ತಿದ್ದ ಪೊಲೀಸರಿಗೆ, ಆಕೆ ತಮಿಳುನಾಡಿಗೆ ಪರಾರಿಯಾಗಿದ್ದ ಮಾಹಿತಿ ಸಿಕ್ಕಿತ್ತು. ಆನಂತರ ಕೇರಳದಲ್ಲಿ ಪತ್ತೆಯಾಗಿದ್ದಾಳೆ.
ಇತ್ತೀಚೆಗೆ ಖಾಸಗಿಯಾಗಿ ಯುಟ್ಯೂಬ್ ನಡೆಸುತ್ತಾ, ಶ್ರೀಮಂತರನ್ನು ಹನಿಟ್ರ್ಯಾಪ್ ಗೆ ತಳ್ಳಿ ಹಣ ಸುಲಿಗೆ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು, ಇಂಜಿನಿಯರ್ ಗಳು, ಉದ್ಯಮಿಗಳು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಅವರಿಂದ ವಸೂಲಿ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಇಂದಿರಾ ನಗರದ ಬ್ಯೂಟಿ ಪಾರ್ಲರ್ ಒಂದರ ಮಾಲೀಕರನ್ನು, ನಿಮ್ಮ ಬ್ಯೂಟಿಪಾರ್ಲರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ನಿಮ್ಮ ಕಥೆಯನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.