ಬೆಂಗಳೂರು : ಬಿ. ಆರ್ ಅಂಬೇಡ್ಕರ್ ಈ ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ತಂದಿರುವುದು ಸಮಾಜದಲ್ಲಿ ಹಿಂದೆ ಉಳಿದವರನ್ನು ಆರ್ಥಕವಾಗಿ, ಸಾಮಾಜಿಕವಾಗಿ ಮುಂದೆ ತರುವುದಕ್ಕೆ. ಓಟ್ ಬ್ಯಾಂಕ್ ರಾಜಕೀಯಕ್ಕಲ್ಲ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಮೀಸಲಾತಿ ಎನ್ನುವುದು ಈಗ ಓಟ್ ಬ್ಯಾಂಕ್ ರಾಜಕೀಯ ಆಗಿದೆ. ಮೀಸಲಾತಿ ಎನ್ನುವುದು ಬರಿ ಓಟ್ ಬ್ಯಾಂಕ್ ರಾಜಕೀಯ ಅಷ್ಟೆ ಅಲ್ಲದೆ ಹಿಂದುಳಿದ ದಲಿತರಿಗೆ ಸಾಮಾಜಿಕ ನ್ಯಾಯ ಕೊಡುವ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇದನ್ನು ನಮ್ಮ ಪೂರ್ವಜರು ತಂದಿದ್ದಾರೆ. ಮಾದಿಗ ಸಮುದಾಯಕ್ಕೆ ಆರ್ಥಿಕ ನೆರವು ನೀಡಿದ್ದು ಯಡಿಯೂರಪ್ಪ ಮಾತ್ರ ಎಂದಿದ್ದಾರೆ.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸದಾಶಿವ ಆಯೋಗ ಜಾರಿಗೆ ತರುತ್ತೇವೆಂದು ಹೇಳಿದರು. ಏನೂ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ನೀಡುತ್ತೇವೆ ಎಂದು ಸಿಎಂ, ಡಿಸಿಎಂ ಅವರು ಮೋಸ ಮಾಡಿದ್ದಾರೆ. ಶೀಘ್ರದಲ್ಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು. ಈ ಮಾತಿಗೆ ತಪ್ಪಿದರೇ, ನೀವು ವಿಧಾನ ಸೌಧದಲ್ಲಿ ಕೂತು ಅಧಿಕಾರ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.