ಕೊಡಗು : ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ರಾಣಿಪೇಟೆಯ ಫಾಹಾದ್ (32), ತ್ಯಾಗರಾಜ್ ಕಾಲೋನಿಯ ಬಾಸಿಲ್ (29), ಹಾಗೂ ಸಮೀರ್ (31) ಎಂದು ಗುರುತಿಸಲಾಗಿದೆ.

ಸ್ಪೈಸಸ್ ಅಂಗಡಿಯಲ್ಲಿ ಕುಳಿತು ಆರೋಪಿಗಳು ವಿಡಿಯೋ ಮಾಡಿ ಅವಾಚ್ಯ ಪದಗಳಿಂದ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿದ್ದರು. ಈ ವಿಡಿಯೋ ವೈರಲ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮೂವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಮಡಿಕೇರಿ ನಗರ ಠಾಣೆಗೆ ಕೊಡಗು ಜಿಲ್ಲಾ ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆ ಇದೀಗ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಸಿಎಂ ಇನ್ನಾದರೂ ದ್ವೇಷ ರಾಜಕಾರಣ ಬದಿಗಿಟ್ಟು, ಕೇಂದ್ರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು | ಬಿವೈವಿ



















