ನವದೆಹಲಿ: ಲೋಕಸಭಾ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿದೇಶಿ ಪ್ರವಾಸಕ್ಕೆ ತೆರಳುವ ಬದಲಾಗಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಬಿಜೆಪಿ ಸಲಹೆ ನೀಡಿದೆ.
ಈ ಸಂಬಂಧಿಸಿದ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್, ಮಲೇಷ್ಯಾ ಪ್ರವಾಸಕ್ಕೆ ತೆರಳುತ್ತಿರುವ ರಾಹುಲ್ ಅವರ ಕಾಲನ್ನು ಬಿಜೆಪಿ ಹೀಗೆ ಎಳೆದಿದ್ದಲ್ಲದೇ, ‘ರಜೆಯಲ್ಲಿ ವಿದೇಶಿ ಪ್ರವಾಸಕ್ಕೆ ತೆರಳುತ್ತಿರುವ ರಾಹುಲ್ ಗಾಂಧಿ ಶುಭಾಶಯಗಳು. ಕೆಲವೊಮ್ಮೆ ಸಾಮಾನ್ಯ ರಾಜಕಾರಣಿಯಾಗಿದ್ದರೆ, ನಾನು ತುಂಬಾ ಕೆಲಸ ಮಾಡಿದ್ದೇನೆ ಎಂದು ರಜೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಆದರೆ, ಸಾರ್ವಜನಿಕ ಜೀವನದಲ್ಲಿ ಯಾವುದೇ ವಿರಾಮಗಳು ಇರುವುದಿಲ್ಲ ಎಂದು ರಾಹುಲ್ ಗೆ ನೆನಪಿಸುತ್ತೇನೆ’ ಎಂದು ಹೇಳಿದ್ದಾರೆ.
ಎಂದಿಗೂ ಜನ ನಾಯಕನಾದವರು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಪಂಜಾಬ್ ಹಾಗೂ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿ ಸಂಕಷ್ಟದಲ್ಲಿರುವ ಜನರನ್ನು ರಾಹುಲ್ ಭೇಟಿಯಾಗಿದ್ದರೆ ಉತ್ತಮವಿತ್ತು ಎಂದು ರವಿಶಂಕರ್ ಸಲಹೆ ನೀಡಿದ್ದಾರೆ.
ಮಾತ್ರವಲ್ಲದೇ, ‘ಬಿಹಾರ ರಾಜಕಾರಣದ ಬಿಸಿ ತಾಳಲಾರದೆ ಕಾಂಗ್ರೆಸ್‌ನ ಯುವರಾಜರು ವಿದೇಶಿ ಪ್ರವಾಸ ಮಾಡುತ್ತಿದ್ದಾರೆಯೇ ಅಥವಾ ಯಾರಿಗೂ ತಿಳಿಯದ ರಹಸ್ಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆಯೇ’ ಎಂದವರು ಪ್ರಶ್ನಿಸಿದ್ದಾರೆ.
ಜನರು ಪ್ರವಾಹದಿಂದ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ಅವರು ರಜೆಗಾಗಿ ತೆರಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.