ರಾಂಚಿ: ಮನೆಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಪ್ರತಿ ಮನೆಗೆ 80 ಸಾವಿರ ರೂ.ವರೆಗೆ ಅನುದಾನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಾರ್ಖಂಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಲಾರ್ ದಿಂದ ಉತ್ಪಾದಿಸುವ ವಿದ್ಯುತ್ ಗೆ ಶೂನ್ಯ ವಿದ್ಯುತ್ ಬಿಲ್ ಇರುತ್ತದೆ. ಅಲ್ಲದೇ, ನಿಮ್ಮ ಅಗತ್ಯಕ್ಕಿಂತ ಹೆಚ್ಚು ಇರುವ ವಿದ್ಯುತ್ ನ್ನು ಸರ್ಕಾರವೇ ಖರೀದಿಸುತ್ತದೆ ಎಂದು ಹೇಳಿದ್ದಾರೆ.
ಜಾರ್ಖಂಡ್ ಜನರಿಗೆ ಈ ಯೋಜನೆ ತುಂಬಾ ಸಹಕಾರಿಯಾಗಲಿದೆ. ಏಕೆಂದರೆ, ಇಲ್ಲಿನ ಸರ್ಕಾರಗಳು ನಿಮಗೆ ಬಡತನವನ್ನೇ ನೀಡಿವೆ. ಆದರೆ, ನಾವು ನಿಮ್ಮ ಪ್ರಗತಿ ಬಯಸುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಎಂಎಂನಂತಹ ವಿವಿಧ ಪಕ್ಷಗಳು ಈ ಪ್ರದೇಶವನ್ನು ಹಲವು ವರ್ಷಗಳ ಕಾಲ ಆಳಿವೆ. ರು ಸಂತಾಲ್ ಸಮುದಾಯಕ್ಕೆ ವಲಸೆ, ಬಡತನ ಮತ್ತು ನಿರುದ್ಯೋಗವನ್ನು ಮಾತ್ರ ನೀಡಿದ್ದಾರೆ. ಸಿಎಂ ಆದವರು ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರೂ ಇಲ್ಲಿನ ಜನರಿಗೆ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದು ತಪ್ಪಿಲ್ಲ ಎಂದು ಆರೋಪಿಸಿದ್ದಾರೆ.
ಸಾಮೂಹಿಕ ಪ್ರಭಾವವನ್ನು ದುರ್ಬಲಗೊಳಿಸುವ ಸಲುವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು, 38 ಸ್ಥಾನಗಳಿಗೆ ನ. 20ರಂದು ಮತದಾನ ನಡೆಯಲಿದೆ.