ಕಾರವಾರ: ಜೈಲಿನಲ್ಲಿ ಕೈದಿಗಳು ತಂಬಾಕಿಗಾಗಿ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ (Uttara Kannada District) ಕಾರವಾರ ನಗರದ ಜೈಲಿನಲ್ಲಿ (Karwar Jail) ಕೈದಿಗಳು ಜೈಲು ಸಿಬ್ಬಂದಿಗೆ ತಂಬಾಕು ಸೇರಿದಂತೆ ಕೆಲವು ವಸ್ತುಗಳನ್ನು ತಂದುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಇದಕ್ಕೆ ಜೈಲು ಸಿಬ್ಬಂದಿ ಒಪ್ಪಿಲ್ಲ. ತಂಬಾಕು ತಂದು ಕೊಡಲು ನಿರಾಕರಿಸಿದ್ದಾರೆ. ಹೀಗಾಗಿ ಅಲ್ಲಿದ್ದ ಕೆಲ ಕೈದಿಗಳು ಕಲ್ಲಿನಿಂದ ಸ್ವಯಂ ಹಲ್ಲೆ ಮಾಡಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ.
ತಂಬಾಕು ನೀಡದ್ದಕ್ಕೆ ಇಬ್ಬರು ಖೈದಿಗಳು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಮಹಮ್ಮದ್ ಮುಜಾಮಿಲ್, ಫರಾನ್ ಛಬ್ಬಿ ಕಲ್ಲಿನಿಂದ ಜಜ್ಜಿಕೊಂಡು ಹಲ್ಲೆ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿಕೊಂಡ ನಂತರ ವಾರ್ಡನ್ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಆನಂತರ ಕೈದಿಗಳು ವಾರ್ಡನ್ ಗಳೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಪರಸ್ಪರ ಹಲ್ಲೆ ಮಾಡಿಕೊಂಡಿರುವ ಕೈದಿಗಳನ್ನು ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಕೈದಿಗಳ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.