ಬೆಂಗಳೂರು: ಮಹಿಳಾ ಉದ್ಯೋಗಿಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದ ಇನ್ಫೋಸಿಸ್ ಉದ್ಯೋಗಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆಂದ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಆರೋಪಿ ಎನ್ನಲಾಗಿದೆ. ಆರೋಪಿಯು ಎಲೆಕ್ಟ್ರಾನಿಕ್ ಇನ್ಫೋಸಿಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಶೌಚಾಲಯಕ್ಕೆ ತೆರಳಿದ್ದ ಮಹಿಳಾ ಉದ್ಯೋಗಿಯ ಅಶ್ಲೀಲ ವಿಡಿಯೋವನ್ನು ಆರೋಪಿ ರೆಕಾರ್ಡ್ ಮಾಡಿದ್ದ ಎನ್ನಲಾಗಿದೆ. ಪಕ್ಕದ ಶೌಚಾಲಯದ ಕಮೊಡ್ ಮೇಲೆ ನಿಂತು ರಹಸ್ಯವಾಗಿ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ. ಆದರೆ, ಆ ವೇಳೆ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ರಿಪ್ಲೆಕ್ಟ್ ಆಗಿದೆ. ಕೂಡಲೇ ಯುವತಿ ಹೊರ ಬಂದು ನೋಡಿದಾಗ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.
ಕೂಡಲೇ ಮಹಿಳೆ ಕಿರುಚಾಡಿದ್ದು, ಕ್ಷಮೆ ಕೇಳಿದ್ದಾನೆ. ಸಿಬ್ಬಂದಿ ಬಂದು ಪರಿಶೀಲನೆ ಮಾಡಿದಾಗ ವಿಡಿಯೋ ಪತ್ತೆಯಾಗಿದೆ. ಆತನ ಮೊಬೈಲ್ ನಲ್ಲಿ ಸುಮಾರು 300ಕ್ಕೂ ಅಧಿಕ ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಇಂತಹ ಘಟನೆ ಬೆಳಕಿಗೆ ಬಂದಿದ್ದರೂ ಸಿಬ್ಬಂದಿ ಮಾತ್ರ ಕ್ಷಮೆ ಕೇಳಿಸಿ ಸುಮ್ಮನಾಗಿದ್ದಾರೆ. ಆದರೆ, ಮಹಿಳಾ ಉದ್ಯೋಗಿ ಪತಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಗಲಾಟೆ ಮಾಡಿ ಇನ್ಫೋಸಿಸ್ ಕಂಪನಿ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂತರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಹಿನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.