ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ತಂತ್ರಜ್ಞಾನ ಸಮಾಲೋಚಕರ (Information Technology Consultant) ಹುದ್ದೆ ಖಾಲಿ ಇದ್ದು, ಜಿಲ್ಲಾಡಳಿತವು ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಿದೆ. 3-5 ವರ್ಷ ಅನುಭವ ಇದ್ದವರ ಜತೆಗೆ ಫ್ರೆಶರ್ ಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿnಲ್ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ವಿಳಾಸವನ್ನು ಕೂಡ ನೀಡಲಾಗಿದೆ.
ಬಿಇ ಅಥವಾ ಬಿ.ಟೆಕ್ ಅಥವಾ ಬಿಸಿಎ ಶಿಕ್ಷಣವನ್ನು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್ ಟೆಲಿಕಾಂ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ 27 ಸಾವಿರ ರೂ. ಸಂಬಳ ನೀಡಲಾಗುತ್ತದೆ.
ಗುತ್ತಿಗೆ ಆಧಾರದ ಮೇಲೆ ನೇಮಕ
ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆ ಅವಧಿ ಮುಗಿದ ನಂತರ, ಹುದ್ದೆಯ ಮೇಲೆ ಹಕ್ಕು ಚಲಾಯಿಸಲು ಅವಕಾಶ ಇರುವುದಿಲ್ಲ. ಅಗತ್ಯವಿದ್ದರೆ, ಸೇವೆ ಅವಧಿ ಮುಂದುವರಿಸುವ ಅಧಿಕಾರ ಜಿಲ್ಲಾಡಳಿತಕ್ಕೆ ಇರುತ್ತದೆ. ಇಲ್ಲವಾದಲ್ಲಿ ಅಭ್ಯರ್ಥಿ ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಗಮನಿಸಬೇಕಾದ ಸಂಗತಿಗಳು
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನಿಷ್ಠ 3 ರಿಂದ 5 ವರ್ಷ ಕೆಲಸ ಮಾಡಿದ ಅನುಭವ ಇದ್ದವರಿಗೆ ಪ್ರಮುಖ ಆದ್ಯತೆ.
- ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು ಎಂ.ಎಸ್. ಆಫೀಸ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.
- ಆಸಕ್ತಿ ಉಳ್ಳವರು ದಿನಾಂಕ 9-04-2025ರೊಳಗೆ ನೊಂದಣಿ ಅಂಚೆಯ ಮೂಲಕ ತಮ್ಮ ಸ್ವವಿವರದೊಂದಿಗೆ (ಪದವಿ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ ಹಾಗೂ ಇನ್ನಿತರ ದಾಖಲೆಗಳು) ಸ್ವಯಂ ಪ್ರಮಾಣಿಸಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7899085564. ಇ-ಮೇಲ್ ವಿಳಾಸ: [email protected]. ಅರ್ಜಿ ಸಲ್ಲಿಸಿದವರ ಶೈಕ್ಷಣಿಕ ಅರ್ಹತೆ, ಅನುಭವದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ ನಡೆಸಿ, ದಾಖಲೆ ಪರಿಶೀಲನೆ ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ.