ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದೋರ್ ಮಾದರಿಯ ಘಟನೆ ಸಂಭವಿಸಿದೆ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಲಿಂಗರಾಜಪುರಂನ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ನಡೆದಿದೆ.
ಇದೀಗ ಜಲಮಂಡಳಿಯೂ ಮಿಶ್ರಣದ ಮೂಲದ ಹುಡುಕಾಟದಲ್ಲಿ ತೊಡಗಿದ್ದು, ಸದ್ಯ ನೀರು ಸರಬರಾಜನ್ನು ಸ್ಥಗಿತಗೊಳಿಸಿದೆ. ಅತ್ಯಾಧುನಿಕ ರೊಬೋಟಿಕ್ ತಂತ್ರಜ್ಞಾನ ಬಳಸುವ ಮೂಲಕ ಸಮಸ್ಯೆಯ ಪತ್ತೆಗೆ ಮುಂದಾಗಿದೆ.
ಕೆಲವರಿಗೆ ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ ಆದರೆ ಅವರು ವಾತವರಣ ಬದಲಾವಣೆಯಿಂದ ಆರೋಗ್ಯದ ಸಮಸ್ಯೆ ಆಗಿರಬಹುದೆಂದು ಸುಮ್ಮನಿದ್ದರು. ಇದೀಗ ನಲ್ಲಿಯಲ್ಲಿ ಕಲುಷಿತ ನೀರು ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಸದ್ಯ ಪ್ರತಿ ಮನೆಯಲ್ಲೂ ಆರೋಗ್ಯ ಇಲಾಖೆಯಿಂದ ಪರೀಶೀಲನೆ ನಡೆಯಲಾಗುತ್ತಿದ್ದು, ಯಾರಿಗಾದ್ರೂ ಆರೋಗ್ಯ ಸಮಸ್ಯೆ ಇದೆಯಾ ಎಂದು ಸಿಬ್ಬಂದಿಗಳು ವಿಚಾರಿಸುತ್ತಿದ್ದಾರೆ.
ಇದನ್ನೂ ಓದಿ : ನಮ್ಮ ಜಾಗ ವಲಸಿಗರ ಪಾಲಾಗ್ತಿದೆ | ನಾಳೆ ಕೊಗೀಲು ಲೇಔಟ್‌ನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾದ ಕರವೇ!



















