ಹಲವು ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿರುವುದನ್ನು ಈಗಾಗಲೇ ಸಾಬೀತು ಮಾಡಿದೆ. ಸದ್ಯ ಸೋಲಾರ್ ಕ್ಷೇತ್ರದಲ್ಲಿ ಕೂಡ ಭಾರತ ಕ್ರಾಂತಿ ಮಾಡಿದೆ.
ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್, ಎಂಬರ್ ವರದಿಯ ಪ್ರಕಾರ, 2023 ರಲ್ಲಿ ಭಾರತವು ಜಪಾನ್ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ (solar power) ದೇಶವಾಗಿದೆ. ಬಿಡುಗಡೆಯಾಗಿರುವ ಗ್ಲೋಬಲ್ ಇಲೆಕ್ಟ್ರಿಸಿಟಿ ರಿವ್ಯೂನಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡಿದೆ. ಜಾಗತಿಕ ವಿದ್ಯುತ್ ಉತ್ಪಾದನೆಯಲ್ಲಿ ಸೌರಶಕ್ತಿಯ ಪಾಲು 2023 ರಲ್ಲಿ ದಾಖಲೆಯ ಶೇ. 5.5ಕ್ಕೆ ಏರಿದೆ ಎಂದು ವರದಿ ಹೇಳಿದೆ. ಸೋಲಾರ್ ಉತ್ಪಾದನೆಯಲ್ಲಿ ಕಳೆದ ಬಾರಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಈಗ ಮೂರನೇ ಸ್ಥಾನ ಗಳಿಸಿದೆ.
2015 ರಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಭಾರತವು ತನ್ನ ಸೌರ ಉತ್ಪಾದನಾ ಸಾಮರ್ಥ್ಯವನ್ನು ಏರಿಕೆ ಮಾಡಿದೆ. 2015ರಿಂದ 2023ರ ನಡುವೆ ಆರು ಪಟ್ಟು ವೇಗವನ್ನು ಪಡೆದುಕೊಂಡಿದೆ.