ಬೆಂಗಳೂರು: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ತಮ್ಮ ಪತಿ ಸೋಮ್‍ವೀರ್ ರಾಥೀ ಜೊತೆ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಗುರುವಾರ (ಮಾರ್ಚ್ 6) ಘೋಷಿಸಿದ್ದಾರೆ. 2024 ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಕುಸ್ತಿ ಕ್ಷೇತ್ರದಿಂದ ವಿಮುಖರಾದ ವಿನೇಶ್, ಈ ಘೋಷಣೆಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ್ದಾರೆ. ವಿನೇಶ್ ಮತ್ತು ರಾಥೀ 2018ರಲ್ಲಿ ಮದುವೆಯಾಗಿದ್ದರು.
ಗುರುವಾರ ತಮ್ಮ ಪೋಸ್ಟ್‌ನಲ್ಲಿ, ವಿನೇಶ್ ತಮ್ಮ ಪತಿ ಜೊತೆಗಿನ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. 30 ವರ್ಷದ ವಿನೇಶ್, ತಮ್ಮ ಪ್ರೇಮಕಥೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಗೊಂಡಿದೆ ಎಂದು ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. ಈ ಪೋಟೋ ಕ್ಯಾಪ್ಶನ್‌ನಲ್ಲಿ ಒಂದು ಪಾದದ ಹಾಗೂ ಹೃದಯದ ಇಮೋಜಿಯೂ ಹಾಕಿದ್ದಾರೆ.
ಅವರ ಅಭಿಮಾನಿಗಳು ಮತ್ತು ಕುಸ್ತಿಪಟುಗಳಾದ ವಿನೇಶ್ ಮತ್ತು ರಾಥೀ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ವಿಶೇಷವಾಗಿ ಬಜರಂಗ್ ಪುನಿಯಾ ಮತ್ತು ಸಾಕ್ಷೀ ಮಲಿಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ದಂಪತಿಗೆ ಅಭಿನಂದನೆಗಳನ್ನು ಕಳಿಸಿದ್ದಾರೆ.
2024 ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ಗೆ ನಿರಾಸೆ
ವಿನೇಶ್ 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರು. ಅವರು ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದರು. ಆದರೆ, ನಿರ್ಣಾಯಕ ದಿನದಲ್ಲಿ 100 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದಕ್ಕಾಗಿ ವಿನೇಶ್ ಸ್ಪರ್ಧೆಯಿಂದ ಅನರ್ಹರಾದರು.
ಇದನ್ನೂ ಓದಿ: Telangana: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ 27ರ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಈ ಘಟನೆ ನಂತರ, ವಿನೇಶ್ ತಮ್ಮ ಅಧಿಕೃತ X (ಟ್ವಿಟ್ಟರ್) ಖಾತೆ ಮೂಲಕ ವಿದಾಯ ಹೇಳಿದ್ದರು.
ಮಾ ಕುಸ್ತಿ (ತಾಯಿ, ಕುಸ್ತಿ) ನನ್ನನ್ನು ಸೋಲಿಸಿದೆ. ನಾನು ಸೋತಿದ್ದೇನೆ. ಕ್ಷಮಿಸಿ, ನಿಮ್ಮ ಕನಸು ಮತ್ತು ನನ್ನ ಧೈರ್ಯ ಒಡೆಯಿತು. ನನಗೆ ಈಗ ಮತ್ತಷ್ಟು ಶಕ್ತಿ ಇಲ್ಲ ಎಂದು ಬರೆದುಕೊಂಡಿದ್ದರು.
ಈ ನಿರ್ಧಾರವನ್ನು ಪುನರ್‌ವಿಮರ್ಶಿಸುವ ಸೂಚನೆ ನೀಡಿದ್ದ ವಿನೇಶ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸಂದೇಶವನ್ನು ಹಂಚಿಕೊಂಡಿದ್ದರು.
ಬಳಿಕ ವಿನೇಶ್ ರಾಜಕೀಯ ಪ್ರವೇಶ ಮಾಡಿ ದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹರಿಯಾಣದ ಜೂಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.