ವಾಷಿಂಗ್ಟನ್ : ಭಾರತೀಯ ಮಹಿಳೆಯೊಬ್ಬಳು ಬಟ್ಟೆ ಅಂಗಡಿಯಿಂದ ಪುರುಷರ ವಸ್ತುಗಳು ಸೇರಿದಂತೆ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೂ ತನ್ನನ್ನು ಕ್ಷಮಿಸಿಬಿಡಿ ಎಂದು ಅಂಗಲಾಚುತ್ತಿರುವುದನ್ನು ನೋಡಬಹುದು. ಹಣ ನೀಡದೆ ಬಟ್ಟೆಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಪೊಲೀಸರು ಪ್ರಶ್ನಿಸಿದಾಗ, ಅಧಿಕಾರಿಗಳಿಗೆ ಅಳುತ್ತಾ ಕ್ಷಮೆಯಾಚಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಭಾರತದಲ್ಲಿರುವ ತನ್ನ ಸಹೋದರನಿಗಾಗಿ ಈ ವಸ್ತುಗಳನ್ನು ಖರೀದಿಸಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಸಹೋದರನಿಗೆ ಮೇಡ್ ಇನ್ ಯುಎಸ್ಎ ಉತ್ಪನ್ನಗಳ ಬಗ್ಗೆ ಒಲವಿತ್ತು. ಹೀಗಾಗಿ ಬಟ್ಟೆ ಖರೀದಿಸಲು ಮುಂದಾದೆ. ತಾನು ತೆಗೆದುಕೊಂಡ ವಸ್ತುಗಳಿಗೆ ಹಣ ನೀಡಲು ಮರೆತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಇನ್ನು ಪೊಲೀಸರಲ್ಲಿ ಮನವಿ ಮಾಡಿದ ಆಕೆ, ತನ್ನ ಕೈಗೆ ಕೋಳ ಹಾಕಬೇಡಿ ಎಂದು ಬೇಡಿಕೊಂಡಳು. ತನಗೆ ಒಂದು ಅವಕಾಶ ಕೊಡುವಂತೆ ಬೇಡಿಕೊಂಡಳು.
ಕೊನೆಗೆ ಆ ಮಹಿಳೆಯ ಕೈಗಳಿಗೆ ಬೇಡಿ ಹಾಕಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆಕೆಯ ಗುರುತು, ಅಂಗಡಿಯ ನಿಖರವಾದ ಸ್ಥಳ ಮತ್ತು ಕದ್ದ ವಸ್ತುಗಳ ಮೌಲ್ಯ ಮುಂತಾದ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಅಧಿಕಾರಿಗಳು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆಕೆಯ ಕೃತ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ
ಇದನ್ನೂ ಓದಿ : ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೋ ಕಳುಹಿಸಿ 250 ರೂ. ಬಹುಮಾನ ಗೆಲ್ಲಿ | BSWMLನಿಂದ ಹೊಸ ಯೋಜನೆ



















