ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನಿತೀಶ್ ಕುಮಾರ್ ಈಗ ಭಾರತೀಯರ ಶುಭ ಹಾರೈಕೆಗೆ ಸಾಕ್ಷಿಯಾಗಿದ್ದಾರೆ.
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನಿತೀಶ್ ಕುಮಾರ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 ಈವೆಂಟ್ ನಲ್ಲಿ ಚಿನ್ನ ಗೆದ್ದಿದ್ದಾರೆ. ನಿತೇಶ್ ಕುಮಾರ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದ್ದಾರೆ.
ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕೊನೆಗೂ ನಿತೀಶ್ ಕುಮಾರ್ ಗೆದ್ದು ಬೀಗಿದರು. ಈ ಐತಿಹಾಸಿಕ ಗೆಲುವಿನ ನಂತರ ನಿತೇಶ್ ಕುಮಾರ್ ತಮ್ಮ ಅಂಗಿಯನ್ನು ಕಳಚಿ ಕೋರ್ಟ್ ನ ತುಂಬಾ ಓಡಾಡುತ್ತ ಸಂಭ್ರಮಿಸಿದರು. ನಿತೇಶ್ ಜೊತೆಗೆ ಅವರ ಕೋಚ್ ಗಳು ಸಹ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು.
ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಫೈನಲ್ ನಲ್ಲಿ ಪ್ರಬಲ ಪೈಪೋಟಿ ಕಂಡು ಬಂದಿತು. ನಿತೀಶ್ ಕುಮಾರ್ ಮೊದಲ ಸೆಟ್ ನ್ನು 21-14 ರಿಂದ ಗೆದ್ದುಕೊಂಡರು. ಒಂದು ಬಾರಿ ಎರಡನೇ ಸೆಟ್ ನಲ್ಲಿ ಇಬ್ಬರೂ ಆಟಗಾರರು 16-16ರಲ್ಲಿ ಸಮಬಲ ಸಾಧಿಸಿದರು. ನಂತರ ಡೇನಿಯಲ್ ಬೆತೆಲ್ ಕಮ್ ಬ್ಯಾಕ್ ಮಾಡಿ 18-21ರಿಂದ ಸೆಟ್ ಗೆದ್ದುಕೊಂಡರು. ಮೂರನೇ ಸೆಟ್ ನಲ್ಲಿ ಗ್ರೇಟ್ ಬ್ರಿಟನ್ ಆಟಗಾರನಿಗೆ ಯಾವುದೇ ಅವಕಾಶ ನೀಡದ ನಿತೀಶ್ ಕುಮಾರ್ 23-21 ರಿಂದ ಗೆದ್ದು ಬೀಗಿದರು. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.