ಬೆಂಗಳೂರು: ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ತತ್ತರಿಸುತ್ತಿರುವ ಹೊತ್ತಿನಲ್ಲಿಯೇ ರೈಲ್ವೆ ಇಲಾಖೆಯು ರೈಲು ಟಿಕೆಟ್ ಬೆಲೆ ಏರಿಕೆ ಮಾಡಿದೆ. ರೈಲ್ವೆ ಇಲಾಖೆಯು (Indian Railways Revises Ticket Prices) ರೈಲ್ವೆ ಟಿಕೆಟ್ ಗಳಿಂದ ಸುಮಾರು 600 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದು, ಇದರ ಭಾಗವಾಗಿಯೇ ಟಿಕೆಟ್ ಬೆಲೆಯೇರಿಕೆ ಮಾಡಲಾಗಿದೆ. ಕಿಲೋಮೀಟರ್ ಲೆಕ್ಕದಲ್ಲಿ ಬೆಲೆಯೇರಿಕೆ ಮಾಡಲಾಗಿದ್ದು, ಇದರ ವಿವರ ಇಲ್ಲಿದೆ.
• ಸುಮಾರು 215 ಕಿಲೋಮೀಟರ್ ಗಿಂತ ಜಾಸ್ತಿ ಪ್ರಯಾಣ ಮಾಡುವವರಿಗೆ ಪ್ರತಿ ಕಿಲೋಮೀಟರ್ ಗೆ ಒಂದು ರೂಪಾಯಿ ಜಾಸ್ತಿ ಮಾಡಲಾಗಿದೆ. ಇದು ತುಂಬ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಜೇಬಿಗೆ ಭಾರ ಎನಿಸಲಿದೆ.
• ಮೇಲ್ ಹಾಗೂ ನಾನ್ ಎಸಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಂಚರಿಸುವವರಿಗೆ ಪ್ರತಿ ಕಿಲೋಮೀಟರ್ ಗೆ 2 ಪೈಸೆ ಜಾಸ್ತಿ ಮಾಡಲಾಗಿದೆ. ಹಾಗೆಯೇ, ಎಸಿ ಬೋಗಿಗಳಲ್ಲಿ ಸಂಚರಿಸುವವರಿಗೂ ಪ್ರತಿ ಕಿಲೋಮೀಟರ್ ಗೆ 2 ಪೈಸೆ ಜಾಸ್ತಿಯಾಗಲಿದೆ.
• ನಾನ್ ಎಸಿ ಬೋಗಿಗಳಲ್ಲಿ ಪ್ರಯಾಣಿಕರೊಬ್ಬರು 500 ಕಿಲೋಮೀಟರ್ ಗಿಂತ ಜಾಸ್ತಿ ಪ್ರಯಾಣಿಸಿದರೆ, 10 ರೂಪಾಯಿ ಹೆಚ್ಚುವರಿಯಾಗಿ ಬೆಲೆಯೇರಿಕೆ ಮಾಡಲಾಗಿದೆ.
ಆದಾಗ್ಯೂ, ಸಬ್ ಅರ್ಬನ್ ಹಾಗೂ ಕಡಿಮೆ ಅಂತರದ ರೈಲುಗಳ ಟಿಕೆಟ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸುಮಾರು 215 ಕಿಲೋಮೀಟರ್ ಒಳಗೆ ಸಂಚರಿಸುವವರಿಗೆ ಈಗಿರುವ ಟಿಕೆಟ್ ಬೆಲೆಯನ್ನೇ ಮುಂದುವರಿಸಲಾಗುತ್ತದೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಬೆಲೆಯೇರಿಕೆಯ ಬಿಸಿ ತಾಗಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ RITES ಸಂಸ್ಥೆಯಲ್ಲಿ 150 ಹುದ್ದೆಗಳ ನೇಮಕಾತಿ : ಎಂಜಿನಿಯರಿಂಗ್ ಮುಗಿಸಿದವರಿಗೆ ಭರ್ಜರಿ ಅವಕಾಶ



















