ಬೆಂಗಳೂರು: ಸರ್ಕಾರಿ ಹುದ್ದೆಗಳ ಹುಡುಕಾಟದಲ್ಲಿರುವವರಿಗೆ ಭಾರತೀಯ ನೌಕಾಪಡೆಯು (Navy Recruitment 2025) ಸಿಹಿ ಸುದ್ದಿ ನೀಡಿದೆ. ಸಿ ದರ್ಜೆಯ 327 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 12ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 1 ಕೊನೆಯ ದಿನವಾಗಿದೆ.
ಯಾವ ಹುದ್ದೆಗಳು ಖಾಲಿ?
ಸರಂಗ್ ಆಫ್ ಲಸ್ಕರ್ಸ್ ವಿಭಾಗದಲ್ಲಿ 57 ಹುದ್ದೆಗಳು ಖಾಲಿ ಇವೆ. ಇನ್ನು ಲಸ್ಕರ್ಸ್ 192, ಫೈಯರ್ ಮ್ಯಾನ್ (ಬೋಟ್ ಕ್ರ್ಯೂ) 73 ಹಾಗೂ ಟೋಪಸ್ ವಿಭಾಗದಲ್ಲಿ 05 ಸಿ ದರ್ಜೆಯ ಹುದ್ದೆಗಳು ಖಾಲಿ ಇವೆ. ಸರಂಗ್ ಆಫ್ ಲಸ್ಕರ್ಸ್ ಹುದ್ದೆಗೆ ಎಸ್ಎಸ್ಎಲ್ಸಿ ಉತ್ತೀರ್ಣ. ಎರಡು ವರ್ಷ ಕಾರ್ಯಾನುಭವ ಹೊಂದಿರಬೇಕು. ಲಸ್ಕರ್ಸ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ ಮಾಡಿರಬೇಕು. ಈಜು ಗೊತ್ತಿರಬೇಕು. ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು.
ಫೈಯರ್ಮನ್ (ಬೋಟ್ ಕ್ರಿವ್) ಹುದ್ದೆಗೆ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಪಾಸ್ ಮಾಡಿರಬೇಕು. ಈಜು ಗೊತ್ತಿರಬೇಕು. ಪ್ರಿ ಸೀ ಟ್ರೈನಿಂಗ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು. ಟೊಪಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಪಾಸಾಗಿರುವ ಜತೆಗೆ ಈಜು ಗೊತ್ತಿರಬೇಕು. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಭಾರತೀಯ ನೌಕಾಪಡೆಯ ವೆಬ್ ಪೋರ್ಟಲ್ https://www.joinindiannavy.gov.in/ ಗೆ ಭೇಟಿ ನೀಡಬೇಕು.
ಅರ್ಜಿ ಸಲ್ಲಿಸಲು ಬಯಸುವವರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷದ ಮಿತಿ ಇದೆ. ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ. ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್ / ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.