ಬರಿ(ಇಟಲಿ): ಇಟಲಿಯ ಬರಿ (Bari) ನಗರದಲ್ಲಿ ನಡೆದ ನಡೆದ ಜಿ7 (G7) ರಾಷ್ಟ್ರಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿದ್ದಾರೆ.
ತಂತ್ರಜ್ಞಾನ ವಿನಾಶಕಾರಿ ಆಗಬಾರದು. ಅದು ಸೃಜನಶೀಲವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ತಂತ್ರಜ್ಞಾನವು ಮನುಷ್ಯನನ್ನು ಚಂದ್ರನತ್ತ ಕರೆದೊಯ್ಯುವ ಧೈರ್ಯ ನೀಡುತ್ತದೆ. ಆದರೆ ಸೈಬರ್ ಭದ್ರತೆಯಂತಹ ಸವಾಲುಗಳನ್ನು ಸಹ ಸೃಷ್ಟಿಸುತ್ತದೆ. ತಂತ್ರಜ್ಞಾನ ಸಮಾಜದ ಎಲ್ಲ ವರ್ಗದ ಜನರನ್ನು ಸೃಜನಶೀಲತೆಯಿಂದ ತಲುಪಬೇಕು. ಅದು ಸಾಮಾಜಿಕ ಅಸಮಾನತೆ ತೊಡೆದು ಹಾಕಬೇಕು ಎಂದು ಹೇಳಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಗ್ಲೋಬಲ್ ಸೌತ್ ದೇಶಗಳ ಕಳವಳಗಳನ್ನು ವ್ಯಕ್ತಪಡಿಸುವುದು ಜವಾಬ್ದಾರಿ ಎಂದು ಭಾರತ ಪರಿಗಣಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಮ್ಮೇಳನದಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ20 ಖಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಗಿದೆ. ಇದು ನಮ್ಮ ರಾಷ್ಟ್ರದ ಸಾಧನೆ ಎಂದು ಹೇಳಿದ್ದಾರೆ.
ಜಿ7 ಸಭೆ ಮುಕ್ತಾಯವಾದ ನಂತರ ಎಲ್ಲ ದೇಶದ ನಾಯಕರ ಗ್ರೂಪ್ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು. ಚುನಾವಣೆಗೂ ಮುನ್ನವೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್ ತಿಂಗಳಿನಲ್ಲಿ ಜಿ7 ಸಭೆಗೆ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಇದು ದೇಶಗಳ ಒಕ್ಕೂಟ ಅಲ್ಲ, ಅತಿಥಿಯಾಗಿ ಬನ್ನಿ ಎಂದು ಆಹ್ವಾನ ನೀಡಿತ್ತು. ಆದರೆ, ಮೋದಿ ಪ್ರಧಾನಿಯಾಗಿಯೇ ಅಲ್ಲಿಗೆ ತೆರಳಿದ್ದಾರೆ.
