ಅಡಿಲೇಡ್ : ಆಸೀಸ್ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 2 ವಿಕೆಟ್ಗಳ ಸೋಲು ಕಂಡಿದೆ. ಆಡಮ್ ಝಂಪಾ ಮತ್ತು ಕ್ಸೇವಿಯರ್ ಬಾರ್ಲೆಟ್ ಅವರ ಮಾರಕ ದಾಳಿ, ಹಾಗೆಯೇ ಮ್ಯಾಥ್ಯೂ ಶಾರ್ಟ್-ಕೂಪರ್ ಕಾನಲಿ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ರೋಚಕ ಹಣಾಹಣಿಯಲ್ಲಿ ಟೀಂ ಇಂಡಿಯಾವನ್ನು ಬಗ್ಗುಬಡಿದಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಸತತ ಎರಡನೇ ಸೋಲಿನ ಮೂಲಕ ಆತಿಥೇಯ ಆಸ್ಟ್ರೇಲಿಯಾಗೆ ಸರಣಿ ಬಿಟ್ಟುಕೊಂಡಿದೆ.
ಅಡಿಲೇಡ್‌ನಲ್ಲಿ ನಡೆದ ಎರಡನೇ ಎಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ ಇನ್ನೂ 22 ಎಸೆತಗಳು ಬಾಕಿ ಉಳಿದಿರುವಂತೆ 8 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಪಂದ್ಯದ ಸಂಕ್ಷಿಪ್ತ ಸ್ಕೋರ್
- ಭಾರತ ತಂಡ 50 ಓವರ್ ಗಳಲ್ಲಿ 264/9, ರೋಹಿತ್ ಶರ್ಮಾ 73(97), ಶ್ರೇಯಸ್ ಅಯ್ಯರ್ 61(77), ಅಕ್ಷರ್ ಪಟೇಲ್ 44(41), ಆ್ಯಡಂ ಝಂಪಾ 60ಕ್ಕೆ 4, ಕ್ಸೇವಿಯರ್ ಬಾರ್ಲೆಟ್ 39ಕ್ಕೆ 3, ಮಿಚೆಲ್ ಸ್ಟಾರ್ಕ್ 62ಕ್ಕೆ 2
- ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 265/8, ಮ್ಯಾಥ್ಯೂ ಶಾರ್ಟ್ 74(78), ಕೂಪರ್ ಕಾನಲಿ ಅಜೇಯ 61(53), ಮಿಚೆಲ್ ಓವನ್ 36(23), ಅರ್ಶದೀಪ್ ಸಿಂಗ್ 41ಕ್ಕೆ 2, ಹರ್ಷಿತ್ ರಾಣಾ 59ಕ್ಕೆ 2, ವಾಶಿಂಗ್ಟನ್ ಸುಂದ್ 37ಕ್ಕೆ 2.