ನವದೆಹಲಿ: ಫಲಿತಾಂಶ ಹೊರ ಬೀಳುತ್ತಿದ್ದಂತೆ ಸರ್ಕಾರ ರಚನೆಯ ಸಾಹಸಕ್ಕೆ ಕೈ ಹಾಕಿದ್ದ ಇಂಡಿಯಾ ಮೈತ್ರಿ, ಸದ್ಯ ಆ ಚಿಂತನೆ ಕೈ ಬಿಟ್ಟಿದೆ.
ಇಂದು ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸದಲ್ಲಿ ಈ ಸಭೆ ನಡೆಯಿತು. ನಮ್ಮ ಮೈತ್ರಿಕೂಟ ಒಗ್ಗಟ್ಟಾಗಿಯೇ ಇರಲಿ. ಬೇರೆಯವರನ್ನು ಕರೆದು ಅವರು ಹೇಳಿದಂತೆ ಕುಣಿಯುವುದು ಬೇಡ.
ಬೇರೆಯವರ ಹಸ್ತಕ್ಷೇಪ ಬೇಡ. ಸರ್ಕಾರ ಮಾಡಲು ಸಾಕಷ್ಟು ಸವಾಲುಗಳಿವೆ. ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ನಾವು ತೀರ್ಮಾನಿಸಿದ್ದೇವೆ ಎಂಬ ಚರ್ಚೆ ನಡೆಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ. ಸದನದಲ್ಲಿ ಬಿಜೆಪಿಯ ಧ್ವನಿ ಅಡಗಿಸುವ ಕೆಲಸ ಮಾಡಬೇಕು ಮೈತ್ರಿಕೂಟದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ. ಹಲವು ನಾಯಕರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.