ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಾಗಿ ಕ್ವಿಜ್ ಆಯೋಜಿಸಿದೆ. ರಾಷ್ಟ್ರ ಧ್ವಜದ ಕುರಿತು ಕ್ವಿಜ್ ಆಯೋಜನೆ ಮಾಡಲಾಗಿದ್ದು, ದೇಶದ ಯುವಕ-ಯುವತಿಯರು ಭಾಗವಹಿಸಬಹುದಾಗಿದೆ. ಅಲ್ಲದೆ, ಕ್ವಿಜ್ ನಲ್ಲಿ ಭಾಗವಹಿಸಿ, ಗೆಲುವು ಸಾಧಿಸಿದವರಿಗೆ ಕೇಂದ್ರ ಸಚಿವರೊಂದಿಗೆ ಉಚಿತವಾಗಿ ಸಿಯಾಚಿನ್ ಪ್ರವಾಸ ಕೈಗೊಳ್ಳಬಹುದಾಗಿದೆ. ಆನ್ ಲೈನ್ ಮೂಲಕವೇ ಕ್ವಿಜ್ ನಡೆಯಲಿದ್ದು, ಮನೆಯಲ್ಲೇ ಕುಳಿತು ಭಾಗವಹಿಸಬಹುದಾಗಿದೆ.
ಇದು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಸಿಯಾಚಿನ್ ಭೇಟಿಗೆ ವಿಜೇತರ ಆಯ್ಕೆಯು 21 ರಿಂದ 29 ವರ್ಷದೊಳಗಿನ ಯುವಕರಿಗೆ ಸೀಮಿತವಾಗಿರುತ್ತದೆ. ಟಾಪ್ ಸ್ಕೋರರ್ ಗಳಲ್ಲಿ ಅಂತಿಮವಾಗಿ 25 ವಿಜೇತರನ್ನು ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?
ಅಧಿಕೃತ https://mybharat.gov.in/ ವೆಬ್ ಸೈಟ್ ಗೆ ಭೇಟಿ ನೀಡಬೇಕು
ಅಲ್ಲಿ ಕ್ವಿಜ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
ಹೊಸ ರಿಜಿಸ್ಟರ್ ಆದರೆ ನೋಂದಣಿ ಮಾಡಿಕೊಳ್ಳಬೇಕು
ಅಲ್ಲಿರುವ 25 ಪ್ರಶ್ನೆಗಳಿಗೆ ಉತ್ತರ ನೀಡಬೇಕು
ಆಗಸ್ಟ್ 1ರಿಂದಲೇ ಕ್ವಿಜ್ ನಡೆಯುತ್ತಿದೆ. ಆಗಸ್ಟ್ 15 ಕ್ವಿಜ್ ನಲ್ಲಿ ಭಾಗವಹಿಸಲು ಕೊನೆಯ ದಿನವಾಗಿದೆ. ಕ್ವಿಜ್ ನಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಹೆಸರು, ವಯಸ್ಸು ಸೇರಿ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ಕ್ವಿಜ್ ನಲ್ಲಿ 25ಕ್ಕಿಂತ ಹೆಚ್ಚು ಅಂಕ ಗಳಿಸಿದ ಸ್ಪರ್ಧಿಗಳು, ಕ್ರೀಡಾ ಸಚಿವ ಮನ್ಸುಖ್ ಮಂಡಾವೀಯ ಅವರೊಂದಿಗೆ ಸಿಯಾಚಿನ್ ಗೆ ಭೇಟಿ ನೀಡುವ ಅವಕಾಶ ಪಡೆಯಲಿದ್ದಾರೆ.