ಬಾಗಲಕೋಟೆ: ಬಾಗಲಕೋಟೆಯಲ್ಲಿ 79 ನೇ ಸ್ವಾತಂತ್ರೋತ್ಸವ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಧ್ವಜಾರೋಹಣ ನೆರವೇರಿಸಿದ್ದಾರೆ.
ನವನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಧ್ವಜಾರೋಹಣ ನಡೆಸಿ, ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಧ್ವಜಾರೋಹಣದ ಬಳಿಕ ವಿವಿಧ ಇಲಾಖೆಗಳ ಆಕರ್ಷಕ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ಗದ್ದಿಗೌಡರ, ಎಂ ಎಲ್ ಸಿ ಪಿಎಚ್ ಪೂಜಾರ, ಶಾಸಕ ಹೆಚ್.ವೈ. ಮೇಟಿ, ಹನುಮಂತ ನಿರಾಣಿ, ಡಿಸಿ ಸಂಗಪ್ಪ ಕೆ.ಎಮ್, ಎಸ್ಪಿ ಸಿದ್ದಾರ್ಥ್ ಗೋಯಲ್, ಸಿಇಒ ಶಶಿಧರ್ ಕುರೇರಾ ಉಪಸ್ಥಿತರಿದ್ದರು.