ದುಬೈ: ಕೊರಿಯಾಗ್ರಫರ್ ಧನಶ್ರಿ ವರ್ಮಾ ಅವರಿಂದ ವಿಚ್ಛೇದನ ಪಡೆದಿದ್ದ ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ಇದೀಗ ತಮ್ಮ ಹೊಸ ಸಂಗಾತಿಯನ್ನು ಹುಡುಕಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಸಮಯದಲ್ಲಿ ಯುಜ್ವೇಂದ್ರ ಚಹಲ್ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಅವನೊಂದಿಗೆ ಒಬ್ಬ ಸುಂದರಿ ಯುವತಿ ಕೂಡ ಕಾಣಿಸಿಕೊಂಡಿದ್ದಾಳೆ., ಈಕೆಯ ಚಹಲ್ ಗೆಳತಿ ಎಂದು ಹೇಳಲಾಗುತ್ತಿದೆ.
ಹೊಸ ಹುಡುಗಿಯ ಯುವತಿಯ ಪತ್ತೆಯಾಗದಿದ್ದರೂ, ಸಾಮಾಜಿಕ ಮಾಧ್ಯಮದ ಬಳಕೆದಾರರು ಆಕೆ ಯಾರೆಂದು ಪತ್ತೆ ಮಾಡಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿಲ್ಲ. ಅಂದ ಹಾಗೆ ಚಹಲ್ ಜೊತೆ ಕಾಣಿಸಿಕೊಂಡ ಯುವತಿ ಬೇರೆ ಯಾರೂ ಅಲ್ಲ ಆರ್ ಜೆ ಮಹ್ವಾಶ್.
ಯುಜ್ವೇಂದ್ರ ಚಹಲ್ ಅವರ ಹೆಸರು ಆರ್‌ಜೆ ಮಹ್ವಾಶ್ ಜೊತೆ ತಳುಕು ಹಾಕಿಕೊಂಡಿತ್ತು. ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆದ ಸುದ್ದಿ ಹರಡಿದ್ದ ವೇಳೆ, ಪಾರ್ಟಿಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆ ಸಮಯದಲ್ಲಿ ಮಹ್ವಾಶ್, ಚಹಲ್ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ, ಮತ್ತೊಮ್ಮೆ ಅವರ ವಿಚಾರ ಚರ್ಚೆಗೆ ಬಂದಿದೆ.
ಮಹ್ವಾಶ್ ಯಾರು?
ಆರ್‌ಜೆ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಅವರು ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಹಿಂಬಾಲಕರನ್ನು ಹೊಂದಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಮಹ್ವಾಶ್‌ಗೆ ಬಿಗ್ ಬಾಸ್ ಮತ್ತು ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಕೆಲಸ ಮಾಡುವ ಆಫರ್ ಸಿಕ್ಕಿತು ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ.
ಕ್ರಿಸ್‌ಮಸ್ ಸಂದರ್ಭದ ಔತಣಕೂಟದಲ್ಲಿ ಯುಜ್ವೇಂದ್ರ ಚಹಲ್ ಹಾಗೂ ಆರ್‌ಜೆ ಮಹ್ವಾಶ್ ಕಾಣಿಸಿಕೊಂಡಿದ್ದರು. ಇದಾದ ನಂತರ ಅವರು ಮತ್ತೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರು ಡೇಟಿಂಗ್ ಮಾಡುತ್ತಿರಬಹುದೆಂಬ ಸುದ್ದಿ ಹೊರಬಿದ್ದಿತ್ತು. ಇದರ ಹೊರತಾಗಿಯೂ ಮಹ್ವಾಶ್ ಇದನ್ನು ತಳ್ಳಿ ಹಾಕಿದ್ದರು.