ಬೆಂಗಳೂರು: ರಾಜ್ಯದಲ್ಲಿ ಸರಣಿ ಹೃದಯಾಘಾತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಒದ್ದಾಡುವಂತಾಗಿದೆ.
ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಆಸ್ಪತ್ರೆಯ ಸಿಬ್ಬಂದಿಗೆ ರಜೆ ಕಟ್ ಮಾಡಿದೆ. ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ರಜೆ ಕಟ್ ಮಾಡಲಾಗಿದೆ. ಜೊತೆಗೆ ಜಯದೇವ ಸಂಸ್ಥೆ ಹೆಚ್ಚುವರಿ ವೈದ್ಯರ ಮೊರೆ ಹೋಗಿದೆ. ಬೇರೆ ಕಡೆಯಿಂದ ಹೆಚ್ಚುವರಿ ವೈದ್ಯರನ್ನು ಕರೆಯಿಸಿಕೊಳ್ಳಲಾಗುತ್ತಿದೆ.
ಬುಧವಾರ ಕೂಡ ಓಪಿಡಿಯಲ್ಲಿ 1300ಕ್ಕೂ ಅಧಿಕ ಜನರು ಹೃದಯ ತಪಾಸಣೆಗೆ ಬಂದಿದ್ದಾರೆ. ಈ ಬೆನ್ನಲ್ಲೇ ಸಿಬ್ಬಂದಿಗೆ ವರ್ಕ್ ಲೋಡ್ ಹೆಚ್ಚಾಗಿದೆ ಎಂದು ಡಾ. ರವೀಂದ್ರ ಹೇಳಿದ್ದಾರೆ.