ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐಟಿ ಟೀಂ ಇನ್ವೆಸ್ಟಿಗೇಶನ್ ವೇಗ ಹೆಚ್ಚಿಸಿದೆ. ಮಂಗಳೂರಿಗೆ ಆಗಮಿಸಿರುವ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ, ಇದುವರೆಗೂ ಆದ ತನಿಖೆಯ ಮಾಹಿತಿ ಪಡೆದಿದ್ದಾರೆ.
ಅಲ್ಲದೆ, ತಲೆ ಬುರುಡೆ ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದ ಅನಾಮಿಕ ವ್ಯಕ್ತಿಯನ್ನೂ ಮೊಹಂತಿ ವಿಚಾರಣೆ ನಡೆಸಿದ್ದಾರೆ. ನಿನ್ನೆಯಷ್ಟೇ ತನಿಖಾಧಿಕಾರಿ ಅನುಚೇತ್ ನಿಗೂಢ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಹಲವು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆದಿದ್ದಾರೆ. ಇನ್ನು ಇಂದು ಕೂಡ ವಕೀಲರ ಜೊತೆ ಬಂದ ಅನಾಮಿಕ ವ್ಯಕ್ತಿ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದು, ಮಂಗಳೂರಿನ ಎಸ್ ಐಟಿ ಕಚೇರಿಯಲ್ಲಿ ಪ್ರಣಬ್ ಮೊಹಂತಿ ಮತ್ತೊಂದು ಸುತ್ತಿನ ವಿಚಾರಣೆ ನಡೆಸಿದ್ದಾರೆ. ಆ ಮೂಲಕ ಎಸ್ ಐಟಿ ಟೀಂ, ಕಳೆದ 20 ವರ್ಷದ ಹಿಂದಿನ ಮಹಿಳೆಯರ ನಾಪತ್ತೆ ಕೇಸ್, ಶವ ಹೂತಿಟ್ಟ ಪ್ರಕರಣಗಳ ಬೆನ್ನು ಬಿದ್ದಿದ್ದಾರೆ.



















