ಬೆಂಗಳೂರು ಗ್ರಾಮಾಂತರ : ಹೊಸಕೋಟೆ ದೇವನಹಳ್ಳಿ ಭಾಗದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಹೊಸಕೋಟೆ ತಾಲೂಕಿನ ನೂತನ ಚೆನ್ನೈ ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಪು ಗುಂಪಾಗಿ ಬಂದು ವ್ಹೀಲಿಂಗ್ ಮಾಡಿದ್ದಾರೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಹೊರವಲಯದ ಹೆದ್ದಾರಿಗಳು ಹೆಚ್ಚಿರುವುದರಿಂದ ಪುಡಾರಿಗಳ ಹುಚ್ಚಾಟವು ಹೆಚ್ಚಾಗಿದ್ದು, ರಸ್ತೆ ತುಂಬೆಲ್ಲಾ ಒಬ್ಬರಾದ ಮೇಲೆ ಮತ್ತೊಬ್ಬರು ವ್ಹೀಲಿಂಗ್ ಪ್ರದರ್ಶನ ಮಾಡಿದ್ದಾರೆ.
ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದು, ಬೇರೆ ವಾಹನಗಳು ಓಡಾಡಲು ಪರದಾಡಿವೆ. ಈ ಘಟನೆಯು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಸಾಲು ಸಾಲು ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ | ಇನ್ಮುಂದೆ ಸ್ಲೀಪರ್ ಬಸ್‌ಗಳಿಗೆ 8 ನಿಯಮ ಪಾಲನೆ ಕಡ್ಡಾಯ



















