ಕಬಿನಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹರಿದು ಬರುತ್ತಿದೆ.
ಕಬಿನಿ ಜಲಾಶಯ ಭರ್ತಿಗೆ ಕೇವಲ 4 ಅಡಿ ಬಾಕಿ ಇದ್ದು, 22 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಂದಿದೆ. ಜಲಾಶಯದ ಇಂದಿನ ಮಟ್ಟವನ್ನು ನೋಡೋದಾದ್ರೆ 2280 ಅಡಿಗಳು, ಗರಿಷ್ಠ ಮಟ್ಟ 2284 ಅಡಿಗಳು, ಇಂದಿನ ಒಳ ಹರಿವು 22487 ಕ್ಯೂಸೆಕ್ಸ್, ಹೊರ ಹರಿವು 21,875 ಕ್ಯೂಸೆಕ್ಸ್ ಇದ್ದು ನದಿ ತೀರದ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ.



















