ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀ ಚ್‍ನಲ್ಲಿ ನಿರ್ಮಾಣಗೊಂಡಿರುವ ಸ್ಕೈ ಡೈನಿಂಗ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಸಮುದ್ರ ಮಟ್ಟದಿಂದ ಸುಮಾರು 90 ರಿಂದ 100 ಮೀಟರ್ ಎತ್ತರದಲ್ಲಿ ಕುಳಿತು ಕಡಲ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ರಾಷ್ಟ್ರೀಯ ಹೆದ್ದಾರಿ ನೋಟ, ಸೌಪರ್ಣಿಕಾ ನದಿಯ ಸೌಂದರ್ಯ ನೋಡುತ್ತಾ ನಿಮ್ಮಿಷ್ಟ ಖಾದ್ಯವನ್ನು ಸವಿಯಬಹುದು. ಟೀಮ್ ಮಂತ್ರಾಸ್ ಅವರು ಆಯೋಜಿಸಿರುವ ಸ್ಕೈ ಡೈನಿಂಗ್ ಕರ್ನಾಟಕದ ಎರಡನೇ ತಾಣವಾಗಿದ್ದು ಒಂದು ಬಾರಿ 12 ಜನ ಸ್ಕೈಡೈನಿಂಗ್ ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸ ಬಹುದಾಗಿದೆ.
ಬೇರೆ ಬೇರೆ ರೀತಿಯ ಸ್ಲಾಟ್ ಕೂಡ ಲಭ್ಯವಿದ್ದು, ನಿಮ್ಮ ಬಜೆಟ್ ಗೆ ಅನುಗುಣವಾಗಿ ಸ್ಲಾಟ್ ಆಯ್ಕೆ ಮಾಡಿಕೊಂಡು ಸ್ಕೈಡೈನಿಂಗ್ ನಲ್ಲಿ ನಿಮ್ಮ ಫ್ಯಾಮಿಲಿಯೊಂದಿಗೆ ಏಂಜಾಯ್ ಮಾಡಬುಹುದು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಸ್ಕೈ ಡೈನಿಂಗ್ ಉದ್ಘಾಟಿಸಿ ಮಾತನಾಡಿದರು. ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ಗೆ ದೇಶ- ವಿದೇಶಗಳಿಂದ ದಿನಂಪ್ರತಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ಕೈ ಡೈನಿಂಗ್ ನಿರ್ಮಾಣದಿಂದಾಗಿ ಪ್ರವಾಸಿಗರು ವಿಭಿನ್ನ ರೀತಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯಬಹುದು ಎಂದು ಹೇಳಿದ್ದಾರೆ.
ಟೀಮ್ ಮಂತ್ರಾಸ್ ಸ್ಕೈ ಡೈನಿಂಗ್ ಮಾಲೀಕ ಪ್ರವೇಶ್ ಮಂಜೇಶ್ವರ, ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ, ಟೀಮ್ ಮಂತ್ರಾಸ್ ನ ರಾಕೇಶ್ ಅಥಾವರ್, ನಾರಾಯಣ ಕುಲಾಲ್, ರವಿರಾಜ್, ಗ್ರಾಪಂ ಸದಸ್ಯ ನಾಗರಾಜ ಪಠಕಾರ್, ಸದಾಶಿವ ಗಂಗೊಳ್ಳಿ, ದಿವಾಕರ ಶೆಟ್ಟಿ, ಕೆ.ಪಿ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.