ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (Manmul) ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಮೈತ್ರಿಗೆ ತೀವ್ರ ಮುಖಭಂಗವಾಗಿದೆ.
ಕಾಂಗ್ರೆಸ್ (Congress) ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಸೇರಿದಂತೆ ಬಿಜೆಪಿಗೆ ಮುಖಭಂಗವಾಗಿದೆ. ಹೆಚ್ಚು ಸ್ಥಾನ ಗೆಲ್ಲುವುದರ ಮೂಲಕ ಕಾಂಗ್ರೆಸ್ ಮನ್ಮುಲ್ ವಶಕ್ಕೆ ಪಡೆದಿದೆ.
ಮಂಡ್ಯ ಕ್ಷೇತ್ರದಿಂದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ರಘುನಂದನ್ – 143 (ಜೆಡಿಎಸ್)
ಶಿವಪ್ಪ – 136 (ಕಾಂಗ್ರೆಸ್)
ರಾಮಚಂದ್ರ – 149 (ಜೆಡಿಎಸ್)
ರಾಜು ಕೆ – 61
ವಿಜಯ್ ಕುಮಾರ್ – 65
ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀನಾರಾಯಣ್, ಅಪ್ಪಾಜಿಗೌಡ ಗೆಲುವು ಸಾಧಿಸಿದ್ದಾರೆ.
ಅಪ್ಪಾಜಿಗೌಡ – 170 (ಕಾಂಗ್ರೆಸ್)
ಲಕ್ಷ್ಮೀನಾರಾಯಣ್ – 133 (ಕಾಂಗ್ರೆಸ್)
ದೇವೇಗೌಡ – 73 (ಜೆಡಿಎಸ್)
ನೆಲ್ಲಿಗೆರೆ ಬಾಲು – 76 (ಜೆಡಿಎಸ್)
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಹರೀಶ್ ಗೆಲುವು ಸಾಧಿಸಿದ್ದಾರೆ. ಆದರೆ, ಈ ಕ್ಷೇತ್ರದ ಅಧಿಕೃತ ಘೋಷಣೆಗೆ ಕಾನೂನು ಅಡ್ಡಿಯಾಗಿದ್ದು, ಹೈಕೋರ್ಟ್ ನಿಂದ ಫಲಿತಾಂಶಕ್ಕೆ ತಡೆ ಬಿದ್ದಿದೆ.
ಡಾಲು ರವಿ 137 (ಕಾಂಗ್ರೆಸ್)
ಹರೀಶ್ 123 (ಕಾಂಗ್ರೆಸ್)
ಶಾಸಕ ಮಂಜು 74 (ಜೆಡಿಎಸ್)
ಮಹೇಶ್ ಗೆ 59 (ಜೆಡಿಎಸ್)
ಪಾಂಡವಪುರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಿವಕುಮಾರ್ ಗೆಲುವು ಕಂಡಿದ್ದಾರೆ.
ಶಿವುಕುಮಾರ್ – 98 (ಜೆಡಿಎಸ್)
ರಾಮಚಂದ್ರು – 25 (ಕಾಂಗ್ರೆಸ್)
ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬೋರೆಗೌಡರಿಗೆ ಜಯ ಗಳಿಸಿದ್ದಾರೆ.
ಬಿ ಬೋರೆಗೌಡ – 51
ಕಿಶೋರ್ – 5
ಪುಟ್ಟಸ್ವಾಮಿಗೌಡ – 1 ಈ ಗೆಲುವಿನ ಮೂಲಕ ಕಾಂಗ್ರೆಸ್ ಭರ್ಜರಿ ಜಯ ಗಳಿಸಿ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಮುಖಭಂಗ ಉಂಟು ಮಾಡಿದೆ.