ರಾಣೆಬೆನ್ನೂರು: ಸಹೋದರಿಯೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ವ್ಯಕ್ತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಹೋಗಿ ಶರಣಾಗಿದ್ದಾನೆ. ದಿಲೀಪ್ ಹಿತ್ತಲಮನಿ (47) ಎಂಬಾತನನ್ನು ರಾಜು ಅಲಿಯಾಸ್ ರಾಜಯ್ಯ ಕೊಲೆ ಮಾಡಿರುವ ವ್ಯಕ್ತಿ. ಸಹೋದರಿ ಮತ್ತು ದಿಲೀಪ್ ಒಟ್ಟಿಗೆ ಇರುವುದನ್ನು ನೋಡಿ ಕೋಪಗೊಂಡ ರಾಜಯ್ಯ ಕೈಗೆ ಸಿಕ್ಕಿದ ವಸ್ತುಗಳನ್ನು ದಿಲೀಪ್ ಮೇಲೆ ಎಸೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆನಂತರ ರಾಜಯ್ಯ ಪೊಲೀಸರ ಮುಂದೆ ಶರಣಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದಿಲೀಪ್ ಹಿತ್ತಲಮನಿಗೆ ಹಲವಾರು ಬಾರಿ ರಾಜಯ್ಯ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದರೂ ದಿಲೀಪ್ ಮತ್ತು ರಾಜಯ್ಯನ ಸಹೋದರಿ ಸಂಬಂಧ ಮುಂದುವರೆಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರಾಜಯ್ಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಚಳಕೇರಿ ಗ್ರಾಮದ ಉಮಾ ಹಾಗೂ ರೈಲ್ವೆ ಇಲಾಖೆ ನೌಕರನಾಗಿದ್ದ ದಿಲೀಪ್ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದರು. ಉಮಾ ಬೇರೆ ಮದುವೆಯಾಗಿದ್ದರೂ ಆತನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು ಎನ್ನಲಾಗಿದೆ.



















