ವಿಜಯಪುರ: ಕಳೆದ ಆರು ತಿಂಗಳ ಹಿಂದೆ ದೃಶ್ಯಂ ಚಿತ್ರದ ಮಾದರಿಯಲ್ಲಿ ಕೊಲೆ ಮಾಡಲಾಗಿದ್ದ ಪ್ರಕರಣವೊಂದು ಇದೀಗಾ ರೋಚಕ ರೀತಿಯಲ್ಲಿ ಬೆಳಕಿಗೆ ಬಂದಿದೆ. ಕೆಸಗಾರನೊಬ್ಬ ಮಾಲೀಕನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನಲೆ ಕಳೆದ ಮೇ 31 ರಂದು ಮಹಿಳೆಯ ಪುತ್ರ ಹಾಗೂ ಕುಟುಂಬಸ್ಥರು ಸೇರಿ ಕೊಲೆ ಮಾಡಿರುವ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ ಎ ಗ್ರಾಮದಲ್ಲಿ ನಡೆದಿತ್ತು.
ಮಹಾದೇವಪ್ಪ ಕೊಲೆಯಾಗಿದ್ದ ಕೆಲಸಗಾರ. ಜಮೀನು ಮಾಲೀಕನ ಪತ್ನಿ ಮಲ್ಲಮ್ಮ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಕೇಳಿ ಬಂದಿತ್ತು. ಸವೇಯರ್ ಆಗಿರುವ ಮಲ್ಲಮ್ಮ ಪುತ್ರ ಅಪ್ಪುಗೌಡ ಹಾಗೂ ಕುಟುಂಬಸ್ಥರು ಸೇರಿ ಆತನನ್ನು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ದೃಶ್ಯಂ ಚಿತ್ರದ ಮಾದರಿಯಲ್ಲಿ ಯಾವುದೇ ಫೋನ್ ಬಳಸದೆ, ಊರಲ್ಲೇ ಉಳಿದಕೊಂಡು ಯಾರಿಗೂ ಅನುಮಾನ ಬಾರದಂತೆ ಬಚಾವ್ ಆಗಿದ್ದರು.
ಆದರೆ ಈ ಪ್ರಕರಣ ಸಂಬಂಧ ಪೊಲೀಸರು ಬ್ರೆನ್ ಮ್ಯಾಪಿಂಗ್, ಪಾಲಿಗ್ರಾಪಿ ಪರೀಕ್ಷೆ ಬಳಿಕ ಕೊಲೆ ಈ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಮಹಾದೇವಪ್ಪ ಕೊಲೆ ಮಾಡಿದ್ದ ಅಪ್ಪುಗೌಡ, ಆತನ ತಾಯಿ ಮಲ್ಲಮ್ಮ, ಆತನ ತಂದೆ ಸಿದ್ದನಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಿದ್ರೆ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ | ವಾಟಾಳ್ ನಾಗರಾಜ್ ಎಚ್ಚರಿಕೆ



















