ಬೆಳಗಾವಿ: ಮಹಿಳೆಯೊಬ್ಬರು ತನಗಿಂತ ಚಿಕ್ಕವನೊಂದಿಗೆ ಅಕ್ರಮ ಸಂಬಂಧ ಬಯಸಿ, ಗಂಡನನ್ನೇ ಕೊಲೆ ಮಾಡಿಸಿರುವ ಘಟನೆ ನಡೆದಿದೆ.
ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ. ಈ ಮಹಿಳೆಯ ಮದುವೆಯಾಗಿ 20 ವರ್ಷಗಳ ಕಳೆದಿದ್ದವು. ಮಗಳು ಮದುವೆ ವಯಸ್ಸಿಗೆ ಬಂದಿದ್ದಳು. ಆದರೂ ತನಗಿಂತ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ನೀಲವ್ವ ಎಂಬ ಮಹಿಳೆಯೇ 27 ವರ್ಷದ ಮಹೇಶ್ ಎನ್ನುವ ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ನಿಂಗಪ್ಪನನ್ನೇ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.
ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ನೀಲವ್ವಳಿಗೆ ಮಹೇಶನ ಪರಿಚಯ ಆಗಿತ್ತು. ಇಬ್ಬರೂ ಸಂಘದಲ್ಲೇ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಕಾಮದ ಅಮಲು ಹೆಚ್ಚಾಗುತ್ತಿದ್ದಂತೆ ಅಡ್ಡಿಯಾದ ಪತಿಯ ಮುಗಿಸಲು ಸಂಚು ರೂಪಿಸಿದ್ದಾರೆ. ಕೊಲೆ ಮಾಡಲು ಜಿಲ್ಲೆಯ ಗುಜನಾಳ ಗ್ರಾಮದ ರೌಡಿಶೀಟರ್ ಯಲ್ಲಪ್ಪ ಕೋನಿನ್ ಗೆ ಒಂದೂವರೆ ಲಕ್ಷಕ್ಕೆ ಸುಪಾರಿ ನೀಡಿದ್ದಾರೆ. ಅಡ್ವಾನ್ಸ್ ಎಂದು 75 ಲಕ್ಷ ರೂ. ಹಣವನ್ನೂ ನೀಡಿದ್ದಾರೆ. ಸುಪಾರಿ ಪಡೆದ ಯಲ್ಲಪ್ಪ, ಪತಿ ನಿಂಗಪ್ಪನನ್ನು ಕೊಲೆ ಮಾಡಿ, ಪರಾರಿಯಾಗಿದ್ದ. ಆನಂತರ ತನಿಖೆ ಕೈಗೊಂಡ ಪೊಲೀಸರು ಸತ್ಯ ಹೊರ ಹಾಕಿದ್ದಾರೆ. ಈಗ ಆಂಟಿ ಹಾಗೂ ಯುವಕ ಜೈಲು ಪಾಲಾಗಿದ್ದಾರೆ.