ಬೆಂಗಳೂರು: ಅಕ್ರಮ ಸಂಬಂಧ ಹಿನ್ನಲೆ ವ್ಯಕ್ತಿಯೋರ್ವನ್ನು ಮನಸೋ ಇಚ್ಚೆ ಥಳಿಸಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.
ನರಸಿಂಹರಾಜು (32) ಕೊಲೆಯಾದ ವ್ಯಕ್ತಿ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ನರಸಿಂಹರಾಜು ಮದುವೆ ಯಾಗಿದ್ದ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ.
ಆ ಮಹಿಳೆಯೂ ಆಗಾಗ ನರಸಿಂಹರಾಜು ಮನೆಗೆ ಬರುತ್ತಾ ಇದ್ದರು. ಹಾಗೆಯೇ ಶನಿವಾರ ಕೂಡ ಮಹಿಳೆ ನರಸಿಂಹರಾಜು ಮನೆ ಬಳಿ ಬಿದ್ದಿದ್ದರು. ಇದನ್ನು ತಿಳಿದ ಮಹಿಳೆ ಮನೆಯವರು ಆಕೆಯನ್ನು ಹಿಂಬಾಲಿಸಿ ಬಂದಿದ್ದಾರೆ. ಮನೆಯಲ್ಲಿದ್ದ ನರಸಿಂಹರಾಜುನನ್ನು ಮನೆಯಿಂದ ಹೊರಗಡೆ ಎಳೆದು ಕೊಂಡು ಬಂದು ರಸ್ತೆಯ ಮಧ್ಯೆ ನಾಲ್ಕೈದು ಜನರು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಮಹಿಳೆ ಮನೆಯವರು ರಸ್ತೆಯುದ್ದಕ್ಕೂ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದಾಗ ತೀವ್ರ ಅಸ್ವಸ್ಥನಾಗಿದ್ದ ನರಸಿಂಹರಾಜುನನ್ನು ಕೂಡಲೇ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯಲಾಗಿದೆ. ಅಷ್ಟರಲ್ಲಿ, ನರಸಿಂಹರಾಜು ಸಾವನ್ನಪ್ಪಿದಾಗಿ ವೈದ್ಯರು ಹೇಳಿದ್ದಾರೆ.
ತನ್ನ ಸಾವಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕಾರಣ ಎಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರು ದಾಖಲಾಗಿದ್ದರು ಆರೋಪಿಗ ಳನ್ನು ಇನ್ನು, ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಹಾಯ ಮಾಡಿದ ಯುವತಿಗೆ ಮೈ, ಕೈ ಮುಟ್ಟಿ ಅಸಭ್ಯ ವರ್ತನೆ | ಕಾಮುಕನ ವಿಡಿಯೋ ವೈರಲ್



















