ಬೆಂಗಳೂರು: ಸ್ನೇಹಿತರು ಅಥವಾ ಸಂಬಂಧಿಕರಿಗೆ ಖಾಸಗಿ ಕಾರು ನೀಡುವ ಕುರಿತು ಹಲವಾರು ಗೊಂದಲಗಳಿವೆ. (Car News) ಇದು ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲಿ ಎದುರಾಗುತ್ತದೆ. ಆದರೆ, ಇದು ಕಾನೂನು ಬಾಹಿರವೇ ಎಂಬ ಅನುಮಾನವೂ ಇದೆ. ತುರ್ತು ಸಂದರ್ಭಗಳಲ್ಲಿ ಕಾರುಗಳನ್ನು ಎರವಲು ಪಡೆಯುವುದರಲ್ಲಿ ಕಾನೂನು ತೊಡಕಿಲ್ಲ. ಆದರೆ, ನಿಯಮಿತವಾಗಿ ಇತರರ ಖಾಸಗಿ ವಾಹನಗಳನ್ನು ಬಳಸುವುದು ಕಾನೂನುಬಾಹಿರ ಎಂದು ಹೇಳಲಾಘದೆ.
8 ಅಥವಾ ಅದಕ್ಕಿಂತ ಹೆಚ್ಚು ಆಸನಗಳ ವಾಹನಗಳನ್ನು ಎರವಲು ನೀಡುವುದು ಕಾನೂನುಬಾಹಿರ. ಕುಟುಂಬದ ಸದಸ್ಯರು ತಮ್ಮ ಪೋಷಕರು ಅಥವಾ ಕುಟುಂಬದವರ ವಾಹನ ಬಳಸಬಹುದು. ಆದರೆ, ಖಾಸಗಿ ವಾಹನವನ್ನು ಹಣಕ್ಕಾಗಿ ಕೊಡುವುದು ಅಪರಾಧ. ಖಾಸಗಿ ಕಾರನ್ನು ಟ್ಯಾಕ್ಸಿ ಅಥವಾ ಬಾಡಿಗೆಗೆ ಬಳಸುವುದು ಕಾನೂನು ವಿರುದ್ಧ. ಮಾಲೀಕರಲ್ಲದವರು ಬಳಸುತ್ತಿದ್ದರೆ, ಹಣಕ್ಕಾಗಿ ಬಳಸಲಾಗಿದೆ ಎಂದು ಭಾವಿಸಿ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ತುರ್ತು ಸಂದರ್ಭಗಳಲ್ಲಿ ಸ್ನೇಹಿತರಿಂದ ಕಾರು ಎರವಲು ಪಡೆಯುವುದನ್ನು ಇಲಾಖೆ ಒಪ್ಪುತ್ತದೆ ಮತ್ತು ದಂಡ ವಿಧಿಸುವುದಿಲ್ಲ. ಆದರೆ, ಇದು ನಿಯಮಿತ ಅಭ್ಯಾಸವಾದರೆ ಕಾನೂನು ಉಲ್ಲಂಘನೆಯಾಗುತ್ತದೆ. ಮಾಲೀಕರಲ್ಲದವರು ಚಾಲನೆ ಮಾಡುವಾಗ ಅಪಘಾತವಾದರೆ ವಿಮಾ ಕಂಪನಿ ಪರಿಹಾರ ನಿರಾಕರಿಸಬಹುದು.
ಇದನ್ನೂ ಓದಿ : Team India : ಇಂಗ್ಲೆಂಡ್ ಪ್ರವಾಸಕ್ಕೆ ಮೊಹಮ್ಮದ್ ಶಮಿ ಅನುಮಾನ, ಅರ್ಶದೀಪ್ ಸಿಂಗ್ ಆಯ್ಕೆ
ಕಾನೂನುಬಾಹಿರ ಟ್ಯಾಕ್ಸಿ ಸೇವೆಗಳನ್ನು ತಡೆಯುವುದು ಇಲಾಖೆಯ ಮುಖ್ಯ ಗುರಿಯಾಗಿದೆ. ಖಾಸಗಿ ನೋಂದಣಿಯ ವಾಹನಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಕಾನೂನುಬದ್ಧ ಬಾಡಿಗೆ ಸೇವೆಗಳು ಸ್ವಯಂ ಚಾಲನೆ ಮಾಡುವ ಕಾರು ಬಾಡಿಗೆಗೆ ಪಡೆಯಲು ಪರವಾನಗಿ ಪಡೆದ ಕಂಪನಿಗಳನ್ನು ಬಳಸುವಂತೆ ಸಾರಿಗೆ ಇಲಾಖೆ ಸಲಹೆ ನೀಡುತ್ತದೆ. ಈ ಕಾರುಗಳು ಹಳದಿ ಅಕ್ಷರಗಳ ನಂಬರ್ ಪ್ಲೇಟ್ ಮತ್ತು ಸರಿಯಾದ ವಿಮೆ ಹೊಂದಿರುತ್ತವೆ.
ತುರ್ತು ಸಂದರ್ಭಗಳಲ್ಲಿ ವಾಹನ ಎರವಲು ಪಡೆಯುವುದು ಸರಿಯಾದರೂ, ಅದನ್ನು ನಿಯಮಿತವಾಗಿ ಮಾಡುವುದು ಕಾನೂನು ಸಮಸ್ಯೆ ತಂದೊಡ್ಡಬಹುದು. ಖಾಸಗಿ ವಾಹನಗಳನ್ನು ಬಾಡಿಗೆಗೆ ನೀಡುವವರು ಎಚ್ಚರಿಕೆಯಿಂದ ಇರಬೇಕು.



















