ಬೆಂಗಳೂರು : ಈರುಳ್ಳಿ ಮೂಟೆ ಹೆಸರಲ್ಲಿ ಅಕ್ರಮ ಶ್ರೀಗಂಧದ ತುಂಡುಗಳ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಇದೀಗ ಶ್ರೀಗಂಧ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿನಿಮಾಸ್ಟೈಲ್‌ನಲ್ಲಿ ಕಳ್ಳತನ ಮಾಡುತ್ತಿದ್ದರು. ಟೆಂಪೋದಲ್ಲಿ ಈರುಳ್ಳಿ ಮೂಟೆ ಅಂತಾ ಶ್ರೀಗಂಧದ ಮರಗಳ ಸಾಗಾಟ ಆಗುತ್ತಿದ್ದು, ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಶ್ರೀಗಂಧವನ್ನು ತರುತ್ತಿದ್ದರು. ಇನ್ನೇನು ಡೆಸ್ಟಿನೇಷನ್‌ಗೆ ರೀಚ್ ಆಗಬೇಕು ಅಷ್ಟರಲ್ಲಿ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. ನಾಕಾಬಂದಿ ಹಾಕಿ ಪೋಲಿಸರು ತಪಾಸಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಒಂದು ಕೋಟಿಗೂ ಅಧಿಕ ಮೌಲ್ಯದ 750 ಕೆಜಿ ಶ್ರೀಗಂಧ ವಶಕ್ಕೆ ಪಡೆದಿದ್ದು, 18 ಬ್ಯಾಗ್ ಗಳಲ್ಲಿದ್ದ ಶ್ರೀಗಂಧದ ಮರದ ತುಂಡುಗಳ ಜಪ್ತಿ ಮಾಡಿದ ಪೊಲೀಸರು. ಇದೀಗ ಸಿದ್ಧಾಪುರ ಪೊಲೀಸರು ನಾಲ್ವರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಶೇಖ್ ಶಾರೂಕ್,ಶೇಖ್ ಅಬ್ದುಲ್ ಕಲಾಂ,ಪರಮೇಶ್,ರಾಮ್ ಭೂಪಾಲ್ ಬಂಧಿತರ ಆರೋಪಿಗಳಾಗಿದ್ದಾರೆ. ಆಂಧ್ರದಿಂದ ಬೆಂಗಳೂರು, ಬೆಂಗಳೂರಿಂದ ವಿದೇಶಕ್ಕೆ ಸಪ್ಲೈ ಮಾಡುತ್ತಿದ್ದ ಶಂಕೆ ಇದೆ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರೋ ಡೀಲರ್‌ಗಾಗಿ ಪೋಲಿಸರು ಹುಡುಕಾಟದಲ್ಲಿದ್ದಾರೆ.



















