ಉಡುಪಿ: ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಭರತೇಶ್ ಕಂಕಣವಾಡಿ ಸಿಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅಂಬಾಗಿಲು ಜಂಕ್ಷನ್‌ನಿಂದ ನಿಟ್ಟೂರು ಕಡೆಗೆ ಬರುತ್ತಿದ್ದ ಟಿಪ್ಪರ್‌ನಲ್ಲಿ ಪರವಾನಿಗೆ ಇಲ್ಲದೆ 1.5 ಯುನಿಟ್ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಟಿಪ್ಪರ್ ವಾಹನವನ್ನು ತಡೆದು ಚಾಲಕ ಪ್ರಶಾಂತ್ ನನ್ನು ವಿಚಾರಿಸಿದ ವೇಳೆ ಅಮ್ಮುಂಜೆ ಮರಳು ದಕ್ಕೆ ಬಳಿಯ ಸರಕಾರಿ ಜಾಗದಲ್ಲಿದ್ದ ಮರಳನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಯಾವುದೇ ಪರವಾನಿಗೆ ಇಲ್ಲದ ಹಿನ್ನೆಲೆಯಲ್ಲಿ ಟಿಪ್ಪರ್ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.