ಕೊಪ್ಪಳ: ಆಂದ್ರ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, 5 ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ..
ಆಂದ್ರ ಮೂಲದ ಗೋಪಾಲ ವಾಲ್ಮಿಖಿ, ಮಸ್ತಾನ್, ಶೇಖ್ ಮಹಿಬೂಬ್, ಶೇಖರ್ ಮಲ್ಲಶೆಟ್ಟಿ, ಬಂದಿತ ಆರೋಪಿಗಳು. ಆಂದ್ರ ಪ್ರದೇಶದಿಂದ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಬಳಿ ಕಾರಿನಲ್ಲಿ 5 ಕೆ ಜಿ ಗಾಂಜಾ ತಂದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ, 5 ಕೆ.ಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನಾ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಂದಿಖಾನೆ ಎಡಿಜಿಪಿ ದಯಾನಂದ್ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ | ಹಣಕ್ಕೆ ಡಿಮ್ಯಾಂಡ್ ಮಾಡಿದ ಕಿರಾತಕರು.



















