ಮಂಗಳೂರು: ಬಾಡಿಗೆಗೆ ಮನೆ ಪಡೆದು ಅಕ್ರಮವಾಗಿ ಮದ್ಯ ತಯಾರಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಣವ್.ಪಿ.ಶಣೈ (24), ಅನೂಷ್.ಆರ್ (24) ಬಂಧಿತ ಆರೋಪಿಗಳು.
ಕೋಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಕಂಬಳಪದವಿನಲ್ಲಿರುವ ಮನೆಯೊಂದರಲ್ಲಿಅಕ್ರಮ ಮದ್ಯ ತಯಾರಿ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ಪೋಲೀಸರು, ದಾಳಿ ನಡೆಸಿ ಸುಮಾರು 1,15,110 ಮೌಲ್ಯದ ಮದ್ಯ ವಶ ಪಡಿಸಿಕೊಂಡಿದ್ದಾರೆ.
ಮದ್ಯದ ಜೊತೆಗೆ ಮದ್ಯ ತಯಾರಿಕಾ ಯಂತ್ರೋಪಕರಣ, ಮದ್ಯದ ಬಾಟಲಿಗಳು ಮತ್ತು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಕೋಣಾಜೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















