ಬೆಂಗಳೂರು : ದುಷ್ಕರ್ಮಿಗಳು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುವ ಸಂದರ್ಭ ಚನ್ನಪಟ್ಟಣದಲ್ಲಿ ಯುವಕರ ತಂಡವೊಂದು ಅಡ್ಡಗಟ್ಟಿ ಆರು ಹಸುಗಳ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮಳವಳ್ಳಿಯಿಂದ ಚನ್ನಪಟ್ಟಣ ಮಾರ್ಗವಾಗಿ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ವೇಳೆ ಯುವಕರು ಅಡ್ಡಗಟ್ಟಿದ್ದಾರೆ. ದುಷ್ಕರ್ಮಿಗಳನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.