ಬೆಂಗಳೂರು:ಬೆಳಂಬೆಳಗ್ಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನವುಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ನಾರತ್ತಹಳ್ಳಿ ಬ್ರಿಡ್ಜ್ ಬಳಿ ಬಳಗ್ಗೆ 6.30ರ ಸುಮಾರಿಗೆ ಅನುಮಾನಾಸ್ಪದವಾದ ವಾಹನವನ್ನು ಕಂಡ ಸಾರ್ವಜನಿಕರು, ತಕ್ಷಣ ಮಾರತ್ತಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪಾಳಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಗೋ ಮಾಂಸ ಇರುವುದು ಖಚಿತವಾಗಿದೆ. ಸದ್ಯ ಪೊಲೀಸರು ಗೋ ಮಾಂಸವಿರುವ ವಾಹನವನ್ನು ಸೀಜ್ ಮಾಡಿದ್ದಾರೆ.



















