ಯಾದಗಿರಿ : ಯಾದಗಿರಿಯ ಗುರುಮಠಕಲ್ ಪಟ್ಟಣದಲ್ಲಿ ಅನ್ನಭಾಗ್ಯ ಅಕ್ಕಿ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಅಕ್ಕಿ ಬದಲಿಗೆ ಹಣ ಕೊಟ್ಟರೆ, ಅಕ್ರಮ ದಂಧಗೆ ಕಡಿವಾಣ ಹಾಕಬಹುದು. ಈ ಸಂಬಂಧಿಸಿದಂತೆ ಕೆಲವು ದಿನಗಳಿಂದ ದೂರುಗಳು ಬಂದಿದ್ದವು. ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ನಾನೇ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ. ಸದ್ಯ, ಗುರುಮಠಕಲ್ ಪಟ್ಟಣದಲ್ಲಿ ದಾಳಿ ನಡೆಸಿ ಅಕ್ರಮ ಜಾಲವನ್ನು ಪತ್ತೆ ಹಚ್ಚಿ, ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗುರುಮಠಕಲ್ ನಲ್ಲಿ ಮೊದಲಿನಿಂದಲೂ ಅಕ್ಕಿ ಕಳ್ಳ ದಂಧೆ ನಡೆಯುತ್ತಿದೆ. ಅನ್ನಭಾಗ್ಯ ಅಕ್ಕಿ ಅಕ್ರಮ ತಡೆಯುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಕ್ಕಿ ಗೋಡೌನ್ ನಿಂದ ಹೋಗಿದ್ದಲ್ಲ. ಇಲ್ಲಿ ಜನರಿಂದ ಮಾರಾಟ ಆಗಿರಬಹುದು ಇಲ್ಲ. ಅಂದರೆ, ರೇಷನ್ ಅಂಗಡಿಗಳಿಂದ ಮಾರಾಟ ಆಗಿರಬಹುದು. ಜನರು ಕೂಡ ಅನ್ನಭಾಗ್ಯ ಅಕ್ಕಿ ಯೋಜನೆ ಉಪಯೋಗ ಮಾಡಿಕೊಳ್ಳಬೇಕು, ಮಾರಾಟ ಮಾಡಬಾರದು. ಅಕ್ರಮ ಜಾಲ ತಡೆಗಾಗಿ ಅಕ್ಕಿ ನೀಡುವ ಬದಲಾಗಿ ಅಕ್ಕಿಯ ಹಣವನ್ನೇ ನೀಡುವಂತೆ ಸಂಪುಟ ಸಭೆಯಲ್ಲಿ ಹೇಳಿದ್ದೇವೆ. ಕೇಂದ್ರ ಹಾಗೂ ರಾಜ್ಯ ಅಕ್ಕಿ ಬದಲಿಗೆ ದುಡ್ಡನ್ನೇ ನೀಡದರೇ ಅಕ್ರಮ ದಂಧೆ ಕಡಿಮೆ ಆಗಬಹುದು ಎಂದು ಹೇಳಿದ್ದಾರೆ.
ಅಕ್ಕಿ ಬೇಕಿದ್ದರೇ ಅಕ್ಕಿ ಕೊಡಬೇಕು. ದುಡ್ಡು ಬೇಕಂದವರಿಗೆ ದುಡ್ಡು ಕೊಡಬೇಕು. ಅರ್ಹರು ಅಲ್ಲದೆ ಇದ್ದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂತವರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದ್ದಾರೆ.