ಬಿಗ್ ಬಾಸ್ ಅರಮನೆಗೆ ಪಾರ್ಟಿಗೆ ಬಂದಿರೋ ಅತಿಥಿಗಳು, ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ. ತಮಾಷೆಗೆ ಕಾಲೆಳೆದ ಗಿಲ್ಲಿ ಮೇಲೆ ರಜತ್ ಗರಂ ಆಗಿದ್ದಾರೆ.
ಮಾಜಿ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ, ಉಗ್ರಂ ಮಂಜು, ತ್ರಿವಿಕ್ರಮ್ ಅತಿಥಿಗಳಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ಸ್ಪರ್ಧಿಗಳು ಸ್ಪೆಷಲ್ ಪಾರ್ಟಿ ಕೊಡಬೇಕಿತ್ತು. ಮೋಜು-ಮಸ್ತಿಯಿಂದ ಕೂಡಿರಬೇಕಿದ್ದ ಮನೆಯಲ್ಲಿ ಅತಿಥಿಗಳು ಕೋಪಗೊಂಡಿದ್ದಾರೆ. ಅಷ್ಟಕ್ಕೂ ಏನಾಯ್ತು ಮನೆಯಲ್ಲಿ ಎಂಬುದರ ಪ್ರೋಮೊ ಬಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿರುವ ಉಗ್ರಂ ಮಂಜು ಅವರಿಗೆ ಈಚೆಗೆ ಮದುವೆ ಫಿಕ್ಸ್ ಆಗಿದೆ. ಈ ವಿಚಾರವನ್ನು ಬಿಗ್ ಬಾಸ್ ಅವರು ಹೇಳಿದ್ದಾರೆ. “ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ..” ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಆಗ ಎಲ್ಲರೂ ಓಹೋ ಎಂದು ಕಿರುಚಿದ್ದಾರೆ. ಆದರೆ. ಗಿಲ್ಲಿ ನಟ ಮಾತ್ರ, “ಎರಡನೇಯದ್ದ.. ಮೂರನೇಯದ್ದ..” ಎಂದು ಹೇಳಿದ್ದಾರೆ. ಆಗ ಗಿಲ್ಲಿ ಕಡೆ ಮಂಜು ಲುಕ್ ಕೊಟ್ಟಿದ್ದಾರೆ. ಪ್ರೋಮೋದಲ್ಲಿರುವ ನೆಕ್ಟ್ಸ್ ಡೈಲಾಗ್ ಏನಪ್ಪ ಅಂದ್ರೆ, “ಕೆಲವೊಂದು ಪರ್ಸನಲ್‌ಗೆ ಅಂತ ಬಂದುಬಿಟ್ರೆ ನೀನು ಸಪ್ಲೇಯರ್ ಅಲ್ಲ, ನಾನು ಅತಿಥಿನೂ ಅಲ್ಲ.. ಬೇರೆ ಆಗಿಬಿಡ್ತಿವಿ” ಎಂದು ಮಂಜು ವಾರ್ನಿಂಗ್ ಗಿಲ್ಲಿಗೆ ಕೊಟ್ಟಿದ್ದಾರೆ.
ಆ ಬಳಿಕ ಮೋಕ್ಷಿತಾ ಪೈ, “ನಮ್ಮ ಅಣ್ಣನಿಗೆ ಮದುವೆ ಫಿಕ್ಸ್ ಆಗಿದೆ, ಅದಕ್ಕೆ ಬ್ಯಾಚುಲರೇಟ್ ಪಾರ್ಟಿ ಮಾಡೋಕೆ ಬಂದಿದ್ದೇವೆ” ಎಂದಿದ್ದಾರೆ. ಅದಕ್ಕೂ ಕೌಂಟರ್ ಕೊಟ್ಟ ಗಿಲ್ಲಿ ನಟ, “ಹಂಗಂದ್ರೆ ನೀವೆಲ್ಲಾ ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ” ಎಂದು ಕೇಳಿದ್ದಾರೆ. ತಕ್ಷಣವೇ ಕ್ಯಾಪ್ಟನ್ ಅಭಿ, ಜಾಹ್ನವಿ ಕೂಡ ಗರಂ ಆಗಿರುವುದು ಪ್ರೋಮೋದಲ್ಲಿ ಕಂಡಿದೆ. ಬಿಟ್ಟಿ ಊಟ ಎಂದಿದ್ದಕ್ಕೆ ಗರಂ ಆದ ರಜತ್, “ನೀವು ಕೊಡ್ತಾ ಇದ್ಧೀಯೇನಪ್ಪಾ ಬಿಟ್ಟಿ ಊಟ? ಮಾತುಗಳು ಕರೆಕ್ಟ್ ಆಗಿ ಬರಲಿ. ಮಗಾ ಎಲ್ಲರತ್ರ ಮಾತನಾಡಿದಂಗೆ ನನ್ನ ಹತ್ರ ಮಾತಾಡೋಕೆ ಬರಬೇಡ. ಎಷ್ಟರಲ್ಲಿ ಇರಬೇಕೋ, ಅಷ್ಟ್ರಲ್ಲಿರು ಮಗಾ” ಎಂದಿದ್ದಾರೆ. ಆ ಕ್ಷಣವೇ ತಪ್ಪಾಯ್ತು, ಸಾರಿ, ಸಾರಿ ಎಂದು ಪದೇಪದೇ ಕೇಳಿದ್ದಾರೆ ಗಿಲ್ಲಿ ನಟ. ಇದರ ಪೂರ್ಣ ಮಾಹಿತಿ ಇಂದಿನ (ನ.25) ಸಂಚಿಕೆಯಲ್ಲಿ ಗೊತ್ತಾಗಲಿದೆ.
ಅಲ್ಲದೆ, ಗಿಲ್ಲಿ ನಟ ತಮಾಷೆಗೆ ಹೇಳಿದ್ದರೂ, ಇದು ಸೀರಿಯಸ್ ಆಗಿರುವ ಥರ ಕಾಣಿಸುತ್ತದೆ. ಹಲವು ಬಾರಿಗೆ ಇನ್ನೊಬ್ಬರಿಗೆ ಹರ್ಟ್ ಆಗುವ ಥರ ಮಾತನಾಡಬೇಡ ಎಂದು ಎಲ್ಲರೂ ಗಿಲ್ಲಿಗೆ ಎಚ್ಚರಿಸಿದ್ದರೂ, ಗಿಲ್ಲಿ ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ : ಮದ್ದೂರಿನಲ್ಲಿ ಮನೆ ದರೋಡೆ ಪ್ರಕರಣ ; ಮಾಜಿ ಪುರಸಭಾ ಅಧ್ಯಕ್ಷನ ಬಂಧನ..!



















