ಇಳಯ ದಳಪತಿ ವಿಜಯ್ ಅಭಿಮಾನಿಗಳ ಪಾಲಿಗಿಂದು ನಿಜಕ್ಕೂ ಪೊಂಗಲ್ ಸಂಭ್ರಮ.
ತಮ್ಮ ನೆಚ್ಚಿನ ನಟನ ಹೊಸ ಸಿನಿಮಾಗೆ ಕಾಯುತ್ತಿರುವ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತಹ ನ್ಯೂಸ್ ಒಂದು ಹೊರ ಬಿದ್ದಿದೆ. ವಿಜಯ್ ನಟನೆಯ ಹೊಸ ಸಿನಿಮಾ ಜನನಾಯಗನ್ ಅಂಗಳದಿಂದ ಬಂದಿರುವ ಈ ವಿಷಯ ನಿಜಕ್ಕೂ ಅಭಿಮಾನಿಗಳಿಗೆ ಹಬ್ಬದೂಟವೇ ಸರಿ.

ಹೌದು, ಜನನಾಯಗನ್ ಸಿನಿಮಾದಲ್ಲಿ ಇದೇ ಮೊದಲ ಬಾರಿ ಖ್ಯಾತ ರ್ಯಾಪರ್ ಹನುಮಾನ್ ಕೈಂಡ್ ಧ್ವನಿಯಾಗುತ್ತಿದ್ದಾರೆ. ತಮಿಳಿನ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ ಜನನಾಯಗನ್ ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲಾ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿ ತಮಿಳು ಸಿನಿಮಾಗೆ ಯಂಗ್ ಸೆನ್ಸೇಷನಲ್ ಹನುಮಾನ್ ಕೈಂಡ್ ರನ್ನು ಕರೆತರುತ್ತಿದ್ದಾರೆ.

ಸಿನಿಮಾದಲ್ಲಿ ವಿಜಯ್ ಎಂಟ್ರಿಗೆ ಅತ್ಯದ್ಭುತ ಸಾಂಗ್ ಕಂಪೋಸ್ ಮಾಡಿರುವ ಅನಿರುದ್ಧ್ ಅದಕ್ಕೆ ಯಂಗ್ ವಾಯ್ಸ್ ಹನುಮಾನ್ ಕೈಂಡ್ ರನ್ನು ಧ್ವನಿಯಾಗಿಸಿದ್ದಾರೆ. ಈ ಬೆಳವಣಿಗೆ ಚಿತ್ರದ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಕನ್ನಡದಲ್ಲಿ ಬಂದ ಪಾಪ್ ಕಾರನ್ ಮಂಕಿ ಟೈಗರ್ ಸಿನಿಮಾದ ಮಾದೇವ ಹಾಡಿಗೆ ಹನುಮಾನ್ ಕೈಂಡ್ ಧ್ವನಿಯಾಗಿದ್ದು ವಿಶೇಷ.



















