ಬೆಂಗಳೂರು: ಕರ್ನಾಟಕದ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಖಾಲಿ (IISc Recruitment 2025) ಇರುವ 18 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲೇ ಒಳ್ಳೆಯ ಸಂಬಳ ಸಂಬಳ ಬರುವ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಇದು ಶುಭ ಸುದ್ದಿ ಎನಿಸಿದೆ. ಐಐಎಸ್ಸಿಯಲ್ಲಿ ಖಾಲಿ ಇರುವ ಟೀಚಿಂಗ್ ಅಸಿಸ್ಟಂಟ್ ಹಾಗೂ ಇನ್ ಸ್ಟ್ರಕ್ಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್ 1 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್
ಹುದ್ದೆಗಳ ಹೆಸರು: ಟೀಚಿಂಗ್ ಅಸಿಸ್ಟಂಟ್ ಹಾಗೂ ಇನ್ ಸ್ಟ್ರಕ್ಟರ್
ಒಟ್ಟು ಹುದ್ದೆಗಳು: 18
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಟೀಚಿಂಗ್ ಅಸಿಸ್ಟಂಟ್ ವಿಭಾಗದಲ್ಲಿ 10 ಹುದ್ದೆಗಳು ಖಾಲಿ ಇವೆ. ನೇಮಕಾತಿ ಹೊಂದಿದವರಿಗೆ ಮಾಸಿಕ 30 ಸಾವಿರ ರೂಪಾಯಿಯಿಂದ 42 ಸಾವಿರ ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಇನ್ ಸ್ಟ್ರಕ್ಟರ್ ವಿಭಾಗದಲ್ಲಿ 8 ಹುದ್ದೆಗಳು ಖಾಲಿ ಇದ್ದು, ಮಾಸಿಕ 67 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಎಂ.ಎಸ್ಸಿ, ಎಂ.ಟೆಕ್, ಎಂಸಿಎ ಹಾಗೂ ಪಿಎಚ್.ಡಿ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
– ಮೊದಲಿಗೆ ಅಧಿಕೃತ ವೆಬ್ಸೈಟ್ https://iisc.ac.in/ ಗೆ ಭೇಟಿ ನೀಡಬೇಕು
– ಟೀಚಿಂಗ್ ಅಸಿಸ್ಟಂಟ್ ಹಾಗೂ ಇನ್ ಸ್ಟ್ರಕ್ಟರ್ ಹುದ್ದೆಯ ಅಧಿಸೂಚನೆಯನ್ನು ಓದಬೇಕು
– ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು.
– ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದ ರೀತಿ ಭರ್ತಿ ಮಾಡಿ, ಸಲ್ಲಿಸಬೇಕು