ಬೆಂಗಳೂರು: ಕರ್ನಾಟಕದ ಬೆಂಗಳೂರಿನಲ್ಲೇ ಕೈತುಂಬ ಸಂಬಳ ಬರುವ ಉದ್ಯೋಗ ಹಿಡಿಯಬೇಕು ಎಂದು ಆಶಿಸುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIAP Recruitment 2025)ನಲ್ಲಿ ಖಾಲಿ ಇರುವ 03 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 24 ಕೊನೆಯ ದಿನವಾಗಿದೆ.
ನೇಮಕಾತಿ ಸಂಸ್ಥೆ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್
ಒಟ್ಟು ಹುದ್ದೆಗಳು: 03
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆ ಹೆಸರು: ಲೈಬ್ರರಿ ಟ್ರೈನಿ
ಸಂಬಳ: ಮಾಸಿಕ 30 ಸಾವಿರ ರೂ.
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಎಂಎಲ್ಐಎಸ್ಸಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. 26 ವರ್ಷದೊಳಗಿನ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.iiap.res.in/ ಗೆ ಭೇಟಿ ನೀಡಬೇಕು
ಲೈಬ್ರರಿ ಟ್ರೈನಿ ಹುದ್ದೆಯ ಅಧಿಸೂಚನೆಯನ್ನು ಓದಿ, ಅರ್ಹತೆಯನ್ನು ಪರಿಶೀಲಿಸಬೇಕು
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ಓಪನ್ ಮಾಡಬೇಕು
ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಬೇಕು
ಶುಲ್ಕ ಪಾವತಿ ಮಾಡಬೇಕು
ಅಗತ್ಯ ದಾಖಲೆ ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸಿ
ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಪ್ರತಿಯ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಬೇಕು



















