ನಮ್ಮದು ಹೈಕಮಾಂಡ್ ಇರುವ ಪಕ್ಷ. ದೆಹಲಿ ವರಿಷ್ಠರು ಮನಸ್ಸು ಮಾಡಿದ್ರೆ, ಇಂದೇ ದೊಡ್ಡ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ ಅಂತಾ ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಬದಲಾವಣೆ ಬಯಸಿದರೆ ಆಗಲೇಬೇಕು. ಸಚಿವ ಸ್ಥಾನ ಬಿಡಿ ಅಂತಾ ಹೈಕಮಾಂಡ್ ಹೇಳಿದರೆ, ನಾನಾಗಿರಲಿ, ರಾಜಣ್ಣ ಆಗಿರಲಿ ಎಲ್ಲರೂ ಒಂದೇ ಅಂತಾ ಜಮೀರ್ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ದೆಹಲಿ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದಿರುವ ಜಮೀರ್, ಮುಂದಿನ ಕೆಲ ತಿಂಗಳಲ್ಲಿ ಘಟಿಸಬಹುದಾದ ಕ್ರಾಂತಿಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.


















