ಬೆಂಗಳೂರ: ಬೆಂಗಳೂರಲ್ಲಿ ಪುಂಡರ ಹಾವಳಿ ಮುಂದುವರೆದಿದೆ. ಪುಡಿರೌಡಿಯೊಬ್ಬ ಹೋಟೆಲ್‌ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕೆಆರ್ ಪುರದ ಉಡುಪಿ ಹೋಟೆಲ್ನಲ್ಲಿ ನಡೆದಿದೆ.
ಹೋಟೆಲ್ ಸಿಬ್ಬಂದಿಗೆ ನಿಂದಿಸಿ, ಮುಖಕ್ಕೆ ಪಂಚ್ ಕೊಟ್ಟು, ಪೊಲೀಸರಿಗೆ ದೂರು ಕೊಟ್ಟರೆ ನಿಮ್ಮನ್ನು ಉಳಿಸಲ್ಲ ಅಂತ ಅವಾಜ್ ಹಾಕಿದ್ದಾನೆ. ಪುಂಡರ ಅಟ್ಟಹಾಸಕ್ಕೆ ಹೆದರಿ ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡದ ಸುಮ್ಮನಾಗಿದ್ದಾರೆ.
ಈ ಘಟನಾ ಸಂಬಂಧ ಸದ್ಯ ಸಿಸಿಟಿವಿ ದೃಶ್ಯದ ಮೂಲಕ ಕೆ.ಆರ್ ಪುರಂ ಪೊಲೀಸರು ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಡೆಡ್ಲಿ ಆಕ್ಸಿಡೆಂಟ್.. ಛಿದ್ರ ಛಿದ್ರವಾದ ಟ್ರಾಕ್ಟರ್!



















