ವಿಜಯಪುರ : ಮೊಬೈಲ್ ಟವರ್ ಏರಿ ಕುಡುಕನು ಹುಚ್ಚಾಟ ಮಾಡುತ್ತಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.
ಕೋಟ್ಯಾಳ ಗ್ರಾಮದ ನಿವಾಸಿ ಈ ಶ್ರೀಶೈಲ್ ಕಂಟ ಪೂರ್ತಿ ಕುಡಿದು ಅವಾಂತರ. ಇದೇ ಮೊದಲ ಬಾರಿಗೆ ಅಲ್ಲ ಆಗಾಗ್ಗ ಮೊಬೈಲ್ ಟವರ್‌ಗಳನ್ನ ಹತ್ತಿ ಹುಚ್ಚಾಟ ಮಾಡುತ್ತಿರುತ್ತಾನೆ. ಎಣ್ಣೆ ಕೊಟ್ಟರೆ ವಾಪಾಸ್ ಬರುತ್ತೀನಿ ಎಂದು ಬೆದರಿಕೆ ಕೂಡ ಹಾಕುತ್ತಾನೆ.
ಇದನ್ನೂ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಿಕೋಟಾ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಪತ್ತೆ – ಓರ್ವ ಆರೋಪಿ ಅರೆಸ್ಟ್


















